ಕಾಸರಗೋಡು : ಕೇರಳ ಸಮುದ್ರ ತೀರ ಪ್ರವೇಶಿಸಿ ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಮಂಗಳೂರಿನ ಎರಡು ಬೋಟ್ ಗಳನ್ನು ಕಾಸರಗೋಡು ಮೀನುಗಾರಿಕಾ ಇಲಾಖೆ ವಶಪಡಿಸಿಕೊಂಡಿದೆ.
ಕಾಸರಗೋಡು ಮೀನುಗಾರಿಕೆ ಇಲಾಖೆ, ತ್ರಿಕರಿಪುರ, ಬೇಕಲ್ ಮತ್ತು ಶಿರಿಯಾ ಕರಾವಳಿ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಮಂಗಳೂರು ನೋಂದಣಿಯ ಅರೆಂಜ್ ಮತ್ತು ಅಶಿಯಾನ ಹೆಸರಿನ ಬೋಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೀನುಗಾರಿಕೆ ಇಲಾಖೆ ಸಹಾಯರ ನಿರ್ದೇಶಕ ಕೆ.ವಿ ಸುರೇಂದ್ರನ್ ನೇತೃತ್ವದಲ್ಲಿ ಪಂಜಾವಿ ಕಡಲತೀರದಿಂದ ಒಂಬತ್ತು ನಾಟಿಕಲ್ ಮೈಲು ದೂರದ ಪೂರ್ವಭಾಗದಲ್ಲಿ ಬೋಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬೋಟ್ ಗಳನ್ನು ತೈಕಡಪ್ಪುರಂ ಅಯಿಂಞಲ್ ತರಲಾಗಿದೆ.