Home ಕರಾವಳಿ ಪುತ್ತೂರು: ಕೌನ್‌ ಬನೇಗಾ ಕರೋಡ್‌ ಪತಿಯಲ್ಲಿ 25 ಲಕ್ಷ ರೂ. ಗೆದ್ದಿರುವುದಾಗಿ ಹೇಳಿ ಮಹಿಳೆಗೆ...

ಪುತ್ತೂರು: ಕೌನ್‌ ಬನೇಗಾ ಕರೋಡ್‌ ಪತಿಯಲ್ಲಿ 25 ಲಕ್ಷ ರೂ. ಗೆದ್ದಿರುವುದಾಗಿ ಹೇಳಿ ಮಹಿಳೆಗೆ ವಂಚನೆ

0

ಪುತ್ತೂರು : ಕೌನ್‌ ಬನೇಗಾ ಕರೋಡ್‌ ಪತಿಯಲ್ಲಿ 25 ಲಕ್ಷ ರೂ. ಗೆದ್ದಿರುವುದಾಗಿ ಹೇಳಿ ಮಹಿಳೆಗೆ 12.93 ಲಕ್ಷ ರೂ. ವಂಚಿಸಲಾಗಿದೆ.


ಪುತ್ತೂರು ನಿವಾಸಿ ಝೀನತ್‌ ಬಾನು ಅವರಿಗೆ 2022ನೇ ಮೇ ತಿಂಗಳಲ್ಲಿ ಅಪರಿಚಿತ ವ್ಯಕ್ತಿ ವಾಟ್ಸಪ್‌ ಕರೆ ಮಾಡಿ ತಾನು ಕೌನ್‌ ಬನೇಗಾ ಕರೋಡ್‌ ಪತಿ ಎಂಬ ಕಾರ್ಯಕ್ರಮದಿಂದ ಕರೆ ಮಾಡುತ್ತಿರುವುದಾಗಿ ಹಾಗೂ 25 ಲಕ್ಷ ರೂ.ಲಾಟರಿ ಗೆದ್ದಿರುವುದಾಗಿ ತಿಳಿಸಿದ್ದಾನೆ.

ಅನಂತರ ಆ ಹಣವನ್ನು ಪಡೆಯಲು ತೆರಿಗೆ ಹಾಗೂ ಇನ್ನಿತರ ಶುಲ್ಕಗಳ ಕಾರಣ ಹೇಳಿ 2022 ಮೇ ತಿಂಗಳಿನಿಂದ 2023 ಸೆಪ್ಟಂಬರ್‌13ರ ವರೆಗಿನ ಅವಧಿಯಲ್ಲಿ ವಿವಿಧ ಬ್ಯಾಂಕ್‌ ಖಾತೆಗಳಿಗೆ 12,93, 200 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರು ನೀಡಲಾಗಿದೆ.

LEAVE A REPLY

Please enter your comment!
Please enter your name here