
ಬೆಂಗಳೂರು: ರಾಜ್ಯ ಸರ್ಕಾರದಿಂದ ನಾಲ್ಕನೇ ಗ್ಯಾರಂಟಿ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಈಗಾಗಲೇ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಪ್ರೋತ್ಸಾಹ ಹಣವನ್ನು ಯಜಮಾನಿ ಮಹಿಳೆಯರ ಖಾತೆಗೆ 2000 ರೂ ಜಮಾ ಮಾಡಲಾಗಿದೆ. ಹಾಗಾದ್ರೇ ನಿಮಗೆ ಇನ್ನೂ ಬಂದಿಲ್ಲ ಅಂದ್ರೇ ಏನು ಕಾರಣ ಅಂತ ಮುಂದೆ ಓದಿ.



ರಾಜ್ಯದ ಯಜಮಾನಿ ಮಹಿಳೆಯರಿಗೆ ಪ್ರೋತ್ಸಾಹಿಸೋ ಸಲುವಾಗಿ ಸರ್ಕಾರ ಜಾರಿಗೆ ತಂದಿರುವಂತ ಯೋಜನೆಗಳಲ್ಲಿ ಒಂದು ಗೃಹಲಕ್ಷ್ಮಿ. ಈ ಯೋಜನೆಯ ಅಡಿಯಲ್ಲಿ ಕುಟುಂಬದ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ.ಹಣವನ್ನು ಡಿಬಿಟಿ ಮೂಲಕ ನೋಂದಾಯಿತ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ.

ಈಗಾಗಲೇ 2 ತಿಂಗಳ 4,000 ಹಣವನ್ನು ರಾಜ್ಯ ಸರ್ಕಾರದಿಂದ ಅರ್ಹ ಫಲಾನುಭವಿ ಯಜಮಾನಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ. ಒಂದು ವೇಳೆ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ನಿಮ್ಮ ಖಾತೆಗೆ ಹಣ ಜಮಾ ಆಗಿಲ್ಲ ಅಂದರೇ ಅದಕ್ಕೆ ಕಾರಣ, ನಿಮ್ಮ ರೇಷನ್ ಕಾರ್ಡ್ ಆಕ್ಟೀವ್ ಇಲ್ಲದೇ ಇರೋದಾಗಿದೆ.
ಸೋ ಯಜಮಾನಿ ಮಹಿಳೆಯರು ಸ್ಮಾರ್ಟ್ ಪೋನ್ ಬಳಸ್ತಾ ಇದ್ದರೇ, ಮನೆಯಲ್ಲಿ ಕುಳಿತು ಜಸ್ಟ್ ಆಹಾರ ಇಲಾಖೆಯhttps://ahara.kar.nic.in/Home/EServicesಈ ಲಿಂಕ್ ಕ್ಲಿಕ್ ಮಾಡಿ, ನಿಮ್ಮ ರೇಷನ್ ಕಾರ್ಡ್ ಆಕ್ಟೀವ್ ಇದೆಯೋ ಅಥವಾ ಇಲ್ಲವೋ ಅಂತ ಚೆಕ್ ಮಾಡಿ.
ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ಆಕ್ಟೀವ್ ಇಲ್ಲದೇ ಇದ್ದರೇ, ಈ ಕಾರಣದಿಂದಾಗಿಯೇ ಯಜಮಾನಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆ 2,000 ರೂ ಹಣ ಬಂದಿಲ್ಲ. ಹೀಗಾಗಿ ನೀವು ನಿಮ್ಮ ಹತ್ತಿರದ ಆಹಾರ ಇಲಾಖೆಯ ಕಚೇರಿಗೆ ತೆರಳಿ, ನಿಮ್ಮ ಇ-ಕೆವೈಸಿ ಅಪ್ ಡೇಟ್ ಮಾಡಿದ್ರೇ, ನಿಮ್ಮ ಖಾತೆಗೂ ಆ ಬಳಿಕ ಗೃಹಲಕ್ಷ್ಮಿಯ ರೂ.2,000 ಹಣ ಪ್ರತಿ ತಿಂಗಳು ಜಮಾ ಆಗಲಿದೆ.