Home ತಾಜಾ ಸುದ್ದಿ ಖ್ಯಾತ ಲೇಖಕಿ, ಸಿಎಂ ಸಹೋದರಿ ಇನ್ನಿಲ್ಲ

ಖ್ಯಾತ ಲೇಖಕಿ, ಸಿಎಂ ಸಹೋದರಿ ಇನ್ನಿಲ್ಲ

0

ಭುವನೇಶ್ವರ: ಖ್ಯಾತ ಲೇಖಕಿ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಹಿರಿಯ ಸಹೋದರಿ ಗೀತಾ ಮೆಹ್ತಾ ಅವರು ವಯೋಸಹಜ ಕಾಯಿಲೆಯಿಂದ ಶನಿವಾರ ದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.


ಗೀತಾ ಅವರಿಗೆ 80 ವರ್ಷ ವಯಸ್ಸಾಗಿತ್ತು. ಪ್ರಖ್ಯಾತ ಲೇಖಕಿ, ಸಾಕ್ಷ್ಯಚಿತ್ರ ನಿರ್ಮಾಪಕಿ ಮತ್ತು ಪತ್ರಕರ್ತೆ, ಗೀತಾ ಮೆಹ್ತಾ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಉದ್ಯಮಿ ಪ್ರೇಮ್ ಪಟ್ನಾಯಕ್ ಅವರ ಹಿರಿಯ ಸಹೋದರಿ.

ದೆಹಲಿಯಲ್ಲಿ ಬಿಜು ಪಟ್ನಾಯಕ್ ಮತ್ತು ಜ್ಞಾನ್ ಪಟ್ನಾಯಕ್ ದಂಪತಿಗೆ 1943 ರಲ್ಲಿ ಗೀತಾ ಜನಿಸಿದರು, ಅವರು ಭಾರತದಲ್ಲಿ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು.

ಅವರು ‘ಕರ್ಮ ಕೋಲಾ’, ‘ಸ್ನೇಕ್ ಅಂಡ್ ಲ್ಯಾಡರ್ಸ್’, ‘ಎ ರಿವರ್ ಸೂತ್ರ’, ‘ರಾಜ್’ ಮತ್ತು ‘ದಿ ಎಟರ್ನಲ್ ಗಣೇಶ’ ಸೇರಿದಂತೆ ಪುಸ್ತಕಗಳನ್ನು ಬರೆದಿದ್ದಾರೆ.

LEAVE A REPLY

Please enter your comment!
Please enter your name here