ವಿಜಯನಗರ : ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಎಂ ಎಲ್ ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಸುಮಾರು 5 ಕೋಟಿ ರೂಪಾಯಿ ವಂಚನೆ ಪ್ರಕರಣದ A3 ಆರೋಪಿಯಾಗಿರುವ ಅಭಿನವ ಹಾಲಶ್ರೀ ವಿರುದ್ಧ ಆರೋಪಕ್ಕೆ ಸಂಬಂಧಸಿದಂತೆ ಡೀಲ್ ಪ್ರಕರಣಕ್ಕೂ ಮಠಕ್ಕೂ ಯಾವುದೇ ರೀತಿಯಾದಂತಹ ಸಂಬಂಧವಿಲ್ಲ ಎಂದು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ಹಾಲಸ್ವಾಮಿ ಮಠದ ಶ್ರೀಗಳು ಹೇಳಿದ್ದಾರೆ.
ಸದ್ಗುರು ಹಾಲಶ್ರೀ ಯೋಗಿ ಸ್ವಾಮೀಜಿ ಹಾಗೂ ಸದ್ಗುರು ಸಿದ್ದೇಶ್ವರ ಶ್ರೀ ಹೇಳಿಕೆ ನೀಡಿದ್ದು, ಕೆಲ ಕಾರ್ಯಕ್ರಮಕ್ಕೆ ಹೋಗಬಾರದೆಂದು ಹಾಲಶ್ರೀ ಸ್ವಾಮೀಜಿಗಳಿಗೆ ನಾವು ಹೇಳಿದ್ದೆವು. ಸ್ವಾಮಿಜಿಗಳಾದವರು ರಾಜಕೀಯ ವಿಚಾರಕ್ಕೆ ಎಂದಿಗೂ ಹೋಗಬಾರದು.ರಾಜಕೀಯ ವಿಚಾರಕ್ಕೆ ಹೋದರೆ ಇಂತಹ ಆರೋಪಗಳು ಬರುತ್ತವೆ ಎಂದರು.
ಅಭಿನವ ಹಾಲಶ್ರೀ ಸ್ವಾಮೀಜಿಗಳು ತಪ್ಪು ಮಾಡಿಲ್ಲ ಅಂದರೆ ಹೆದರುವ ಅಗತ್ಯವಿಲ್ಲ.ಶ್ರೀಗಳು ನಿರ್ದೋಷಿಯಾಗಿ ಬರಬೇಕೆಂದು ಮಠದ ಭಕ್ತರ ಆಸೆಯಾಗಿದೆ. 5 ಕೋಟಿ ಡೀಲ್ ಪ್ರಕರಣದ ತನಿಖೆಯು ಯಾವುದೇ ಕಾರಣಕ್ಕೂ ರಾಜಕೀಯವಾಗಿ ನಡೆಯಬಾರದು. ಏನೋ ಷಡ್ಯಂತರ ಇದೆ ಅಭಿನವ ಹಾಲಶ್ರೀಗಳು ಧೈರ್ಯವಾಗಿ ಇರಲಿ ಎಂದು ತಿಳಿಸಿದರು.
ಬೇಕಂತಲೇ ಯಾರೋ ಈ ರೀತಿ ಷಡ್ಯಂತರ ಮಾಡಿದ್ದಾರೆ. ಶ್ರೀಗಳು ಆರೋಪ ಮುಕ್ತರಾಗಿ ಬರಲಿ ಎಂದು ಸದ್ಗುರು ಹಾಲಶ್ರೀಯೋಗಿ ಸ್ವಾಮೀಜಿ ಮತ್ತು ಸದ್ಗುರು ಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.