ಉಡುಪಿ: ಉಡುಪಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ವಂಚಿಸಿದ ಆರೋಪದ ಮೇಲೆ ಪೊಲೀಸರು ಚೈತ್ರಾ ಬಂಧಿಸಿದ್ದಾರೆ.
ಈಗ ಪೊಲೀಸರ ವಶದಲ್ಲಿರುವ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ತನ್ನ ಸ್ನೇಹಿತೆಯ ಹೆಸರಿನಲ್ಲಿ ಬೃಹತ್ ಮನೆ ಕಟ್ಟುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಚೈತ್ರಾ ಕುಂದಾಪುರ ಕಾರ್ಕಳದ ಬೈಲೂರು ಸಮೀಪದ ಕಣಜಾರು ಎಂಬಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟುತ್ತಿದ್ದರು. ಹಣ ವಸೂಲಿ ಪ್ರಕರಣದಲ್ಲಿ ಶ್ರೀಕಾಂತ್‌ನನ್ನು ವಶಕ್ಕೆ ಪಡೆದ ಬಳಿಕ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಅಲ್ಲದೆ ಅಭಿನವ ಹಾಲಶ್ರೀ ಸ್ವಾಮೀಜಿ ಕೂಡ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ಇದೀಗ ತಲೆಮರೆಸಿಕೊಂಡಿದ್ದಾರೆ.