ಮಂಗಳೂರು: ಕೊನೆಗೂ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಚೌತಿ ರಜೆಯ ಗೊಂದಲ ಮುಗಿದಿದೆ. ಗಣೇಶ ಚತುರ್ಥಿಯ ಪ್ರಯುಕ್ತ ಸೋಮವಾರದ ಬದಲಾಗಿ ಮಂಗಳವಾರ ರಜೆ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಗಣೇಶ ಚತುರ್ಥಿ ಆಚರಣೆಯ ಗೊಂದಲ ಇದ್ದು, ಸೆಪ್ಟೆಂಬರ್ 18 ಮತ್ತು ಸೆಪ್ಟೆಂಬರ್ 19 ರಂದು ಎರಡು ದಿನಗಳ ನಡುವೆ ಗೊಂದಲ ಇತ್ತು, ರಾಜ್ಯ ಸರಕಾರ ಸೆಪ್ಟೆಂಬರ್ 18 ರಜೆ ಘೋಷಿಸಿದ್ದರೆ. ಕರಾವಳಿಯಲ್ಲಿ ಜನ ಚೌತಿ ಹಬ್ಬ ಸೆಪ್ಟೆಂಬರ್ 19 ರಂದು ಆಚರಿಸಲಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಹಬ್ಬ ಆಚರಿಸುವ ಕಾರಣ ಅದೇ ದಿನ ಸರ್ಕಾರಿ ರಜೆ ನೀಡಬೇಕು ಒತ್ತಡ ಹಾಕಲಾಗಿದ್ದು, ಈ ಬಗ್ಗೆ ಜನಪ್ರತಿನಿಧಿಗಳು ಕೂಡಾ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಯವರಿಗೆ ಸೆಪ್ಟೆಂಬರ್ 19ರಂದು ರಜೆ ನೀಡಲು ಪತ್ರ ಮೂಲಕ ತಿಳಿಸಿದ್ದರು. ಇದೀಗ ಸರ್ಕಾರದ ಅಧಿಕೃತ ಆದೇಶ ಬಂದಿದೆ.