ಮಂಗಳೂರು:ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿ ಮಾಡಲು ಶೇ. 50 ರಿಯಾಯಿತಿಯೊಂದಿಗೆ ದಂಡ ಪಾವತಿಸಲು ಇಂದು ಕೊನೆಯ ದಿನಾಂಕವಾಗಿದ್ದು, ಇಂದು ಸೆಪ್ಟೆಂಬರ್ 9 ರೊಳಗೆ ವಾಹನ ಸವಾರರು ರಿಯಾಯಿತಿ ದರದಲ್ಲಿ ದಂಡ ಕಟ್ಟಬೇಕು.ಪ್ರಕರಣಗಳ ದಂಡದ ಮೊತ್ತದಲ್ಲಿ ಮತ್ತೊಂದು ಬಾರಿಗೆ ಶೇಕಡಾ 50 ರಷ್ಟು ರಿಯಾಯಿತಿ ನೀಡಿ ಆದೇಶಿಸಿದೆ.ಸೆಪ್ಟೆಂಬರ್ 9 ರೊಳಗೆ ವಾಹನ ಸವಾರರು ರಿಯಾಯಿತಿ ದರದಲ್ಲಿ ದಂಡ ಕಟ್ಟಬಹುದಾಗಿದೆ. ಸಂಚಾರಿ ಪೊಲೀಸ್ ಇಲಾಖೆಯ ಇ-ಚಲನ್ನಲ್ಲಿ ಫೆಬ್ರವರಿ 11, 2023ರ ಒಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಈ ಅವಕಾಶ ನೀಡಲಾಗಿದೆ. ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಿ ಆದೇಶಿಸಲಾಗಿತ್ತು.
ರಿಯಾಯಿತಿ ದರದಲ್ಲಿ ದಂಡ ಕಟ್ಟೋದು ಹೇಗೆ..?
1) ಕರ್ನಾಟಕ ರಾಜ್ಯ ಪೊಲೀಸ್ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಪಾವತಿ ಮಾಡಬಹುದು.
2) ಪೇಟಿಎಂ ಅಪ್ಲಿಕೇಶನ್ ಮುಖಾಂತರವು ಉಲ್ಲಂಘನೆಯ ವಿವರಗಳನ್ನು ಪಡೆದು ಪಾವತಿಸಬಹುದಾಗಿದೆ.
3) ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ವೆಬ್ ಸೈಟ್ ಗೆ ಲಾಗ್ ಇನ್ ಆಗಿ ವಾಹನದ ನೋಂದಣಿ ಸಂಖ್ಯೆ ನಮೂದಿಸುವ ಮೂಲಕ ಬಾಕಿ ಪಾವತಿ ಮಾಡಬಹುದು.
4) ಸಂಚಾರ ನಿರ್ವಹಣ ಕೇಂದ್ರದ ಮೊದಲನೆ ಮಹಡಿಯಲ್ಲೂ ಸಹ ದಂಡ ಪಾವತಿಸಬಹುದಾಗಿದೆ.
5 ) ಹತ್ತಿರ ಸಂಚಾರ ಪೊಲೀಸ್ ಠಾಣೆಗಳಲ್ಲಿ ನಿಮ್ಮ ವಾಹನದ ನೋಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ ಪಡೆಯಬಹುದು. ದಂಡವನ್ನು ಮೊತ್ತವನ್ನು ಪಾವತಿಸಿ ರಶೀದಿ ಪಡೆಯಬಹುದು..