Home ಕರಾವಳಿ ಮಂಗಳೂರು: ನಿರುದ್ಯೋಗ ಯುವಕ-ಯುವತಿಯರಿಗೆ ಸ್ವಂತ ಉದ್ಯೋಗಕ್ಕೆ ಸುವರ್ಣಾವಕಾಶ

ಮಂಗಳೂರು: ನಿರುದ್ಯೋಗ ಯುವಕ-ಯುವತಿಯರಿಗೆ ಸ್ವಂತ ಉದ್ಯೋಗಕ್ಕೆ ಸುವರ್ಣಾವಕಾಶ

0

ಮಂಗಳೂರು: 2023-24 ಸಾಲಿನಲ್ಲಿ ಪಿ.ಎಂ.ಇ.ಜಿ.ಪಿ ಯೋಜನೆ ಗ್ರಾಮೀಣ ಹಾಗೂ ನಗರ ಭಾಗದ ನಿರುದ್ಯೋಗಿಗಳಿಗೆ ಹೊಸದಾಗಿ ಸ್ವಂತ ಉದ್ಯೋಗ ಪ್ರಾರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ.


ಸ್ವಉದ್ಯೋಗ ಮಾಡಿಕೊಳ್ಳುವವರಿಗೆ ಗ್ರಾಮೀಣ, ಪಟ್ಟಣ, ನಗರ ಪ್ರದೇಶದಲ್ಲಿ ಹೊಸ ಉದ್ದಿಮೆ ಘಟಕಗಳನ್ನು ಪ್ರಾರಂಭಿಸುವವರಿಗೆ ಬ್ಯಾಂಕಿನಿಂದ ಉತ್ಪಾದನೆ ಘಟಕಕ್ಕೆ ಗರಿಷ್ಠ 50 ಲಕ್ಷ ಹಾಗೂ ಸೇವಾ ಘಟಕಕ್ಕೆ ಗರಿಷ್ಠ ಮೊತ್ತ 20 ಲಕ್ಷ ರೂಗಳ ವರೆಗೆ ಸಾಲ ಪಡೆಯಲು ಅರ್ಹರಿದ್ದು, ಈ ಸಾಲಕ್ಕೆ ಗರಿಷ್ಟ ಶೇ.25ರಿಂದ 35ರವರೆಗೆ ಇಲಾಖಾ ವತಿಯಿಂದ ಸಹಾಯಧನ ನೀಡಲಾಗುವುದು.
ಅರ್ಹ ಅರ್ಜಿದಾರರು ಆನ್ಲೈನ್ ಮೂಲಕ ಅರ್ಜಿಗಳನ್ನು ಕೆವಿಐಬಿ ಇಲಾಖೆಗೆ ಈ ಕೆಳಗೆ ತಿಳಿಸಿರುವ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಭಾವಚಿತ್ರ, ಆಧಾರ್ ಪ್ರತಿ, ಯೋಜನಾ ವರದಿ, ವಿದ್ಯಾರ್ಥಿ ಪ್ರಮಾಣ ಪತ್ರ, ಘಟಕ ಸ್ಥಳ ಗ್ರಾಮೀಣ ಪ್ರದೇಶವಾಗಿದ್ದಲ್ಲಿ ಗ್ರಾಮ ಪಂಚಾಯಿತಿಯಿಂದ ದೃಡೀಕರಣ, ಜಾತಿ ಪ್ರಮಾಣ ಪತ್ರ, ವಾಸ ಸ್ಥಳ ದೃಢೀಕರಣ, ಮನೆ ತೆರಿಗೆ ಬಾಡಿಗೆ ಕರಾರು ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಕೊಟೇಶನ್ ಇದ್ದಲ್ಲಿ ಜೀವ ವಿಮಾ ಪ್ರತಿ ಇದ್ದಲ್ಲಿ ಈ ಎಲ್ಲ ದಾಖಲೆಗಳನ್ನು ಆನ್ ಲೈನ್ ಮೂಲಕ ಅಪ್ಲೋಡ್ ಮಾಡಿ ಏಕಪ್ರತಿಗಳೊಂದಿಗೆ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಜಿಲ್ಲಾ ಕಛೇರಿ, ಮಂಗಳೂರು ಮಹಾನಗರ ಪಾಲಿಕೆ ಕೆಳಮಹಾಡಿ ಲಾಲ್ ಭಾಗ್ ಇಲ್ಲಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0824-2454800,9480825644ಗೆ ಕರೆ ಮಾಡುವಂತೆ ಜಿಲ್ಲಾ ಗ್ರಾಮೋದ್ಯೋಗ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here