ಕುಡಾಲ್ : ಮಾಸ್ಕ್ ಕುಡಾಲ್ ಇದರ ನೇತ್ರತ್ವದಲ್ಲಿ 77 ನೇ ಸ್ವಾತಂತ್ರದ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ನೇರವೇರಿಸಿದರು. ಅಂದು ಬೆಳಗ್ಗೆ 8.00 ಗಂಟೆಗೆ ಧ್ವಜಾರೋಹಣವನ್ನು ಸಂಘದ ಗೌರವ ಅಧ್ಯಕ್ಷರಾದ ಚಂದ್ರಹಾಸ ಹೆಗ್ಡೆ ನೇರವೇರಿಸಿದರು.
ಜನಪ್ರತಿನಿದಿ, ಸಂಘದ ಸಲಹೆಗಾರ ಅಶೋಕ್ ಭಂಡಾರಿ ಸ್ವಾತಂತ್ರದ ಮಹತ್ವವನ್ನು ಜನರಿಗೆ ತಿಳಿಸಿದರು.
60 ವರ್ಷಗಳ ಹಿಂದಿನ ಭಾರತ ನೆನೆಪಿಸಿದರು.ಮತ್ತು ಮಾಸ್ಕ್ ಇದು ಒಂದು ರಕ್ತ ದಾನಿಗಳ ಸದಸ್ಯರ ಸಂಘ ಎಂದು ಕೊಂಡಾಡಿದರು.
ಸಾಮಾಜಿಕ ಮುಂದಾಳು ತಿಮ್ಮಣ್ಣ ಶೆಟ್ಟಿ ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಮಾಸ್ಕ್ ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಪೂಜಾರಿ ವಹಿಸಿ, ಕ್ರಿಡಾ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಅಜ್ಜೋಡು ಕಾರ್ಯಕ್ರಮವನ್ನು ನಿರೂಪಿಸಿದರು,ಉಪಾಧ್ಯಕ್ಷರಾದ ಭವಿಶ್ ಕುಲಾಲ್ ದನ್ಯವಾದವಿತ್ತರು. ನಂತರ ಲಘು ಉಪಹಾರವನ್ನು ವಿತರಿಸಿ, ನಂತರ ಸಂಘದ ಕಾರ್ಯಕರ್ತರು ಮರುವಳದಿಂದ ಮುದಲಡ್ಕ ವರೆಗಿನ ರಸ್ತೆ ಪಕ್ಕದಲ್ಲಿರುವ ಮರ ಮಟ್ಟುಗಳನ್ನು ಸ್ವಚ್ಚ ಮಾಡಿ ವಾಹನ ಸಂಚಾರ ಹಾದಿಯನ್ನು ಸುಗಮಗೊಳಿಸಲಾಯಿತು