Home ತಾಜಾ ಸುದ್ದಿ ಭೂಮಿಯ ಅಂತಿಮ ಕಕ್ಷೆಗೆ ಕಾಲಿಟ್ಟ ಚಂದ್ರಯಾನ-3 ನೌಕೆ

ಭೂಮಿಯ ಅಂತಿಮ ಕಕ್ಷೆಗೆ ಕಾಲಿಟ್ಟ ಚಂದ್ರಯಾನ-3 ನೌಕೆ

0

 ಚಂದ್ರಯಾನ-3 ನೌಕೆ ಆಗಸ್ಟ್‌ 23ರಂದು ಚಂದ್ರನಲ್ಲಿ ಇಳಿಯುವ ನಿರೀಕ್ಷೆ ಇದ್ದು, ಚಂದ್ರಯಾನ-3 ನೌಕೆ ಚಂದ್ರನ ಮೇಲ್ಪದರದಿಂದ ಕೇವಲ 163 ಕಿಲೋ ಮೀಟರ್‌ ದೂರದಲ್ಲಿದೆ ಎಂದು ತಿಳಿದು ಬಂದಿದೆ.


ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಜು.14 ರಂದು ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿತ್ತು. ಇದೀಗ ಚಂದ್ರಯಾನ-3 ನೌಕೆಯ ಅಂತಿಮ ಸುತ್ತು ಯಶಸ್ವಿಯಾಗಿ ನೆರವೇರಿದ್ದು, ಚಂದ್ರಯಾನ 3 ನೌಕೆ ಚಂದಿರನಿಗೆ ಮತ್ತಷ್ಟು ಸನಿಹವಾಗಿದೆ ಎಂದು ಇಸ್ರೋ (ಇಂಡಿಯನ್‌ ಸ್ಪೇಸ್‌ ರಿಸರ್ಚ್‌ ಆರ್ಗನೈಸೇಶನ್) ‌ಆ.16 ರಂದು ಘೋಷಿಸಿದೆ.
ಆಗಸ್ಟ್‌ 5ರಿಂದ ಹಂತ, ಹಂತವಾಗಿ ಕಕ್ಷೆಯನ್ನು ಎತ್ತರಿಸುವ ಪ್ರಕ್ರಿಯೆಯಲ್ಲಿ ಇಸ್ರೋ ವಿಜ್ಞಾನಿಗಳ ತಂಡ ತೊಡಗಿಕೊಂಡಿದ್ದು, ಚಂದ್ರಯಾನ-3 ನೌಕೆ ಕಕ್ಷೆಯಿಂದ ಸ್ವಯಂ ಆಗಿ ದಕ್ಷಿಣ ಧ್ರುವದಲ್ಲಿ ಸಾಫ್ಟ್‌ ಲ್ಯಾಂಡ್‌ ಆಗಲಿದೆ ಎಂದು ವಿವರಿಸಿದೆ. ಚಂದ್ರನ ಮೇಲೆ ಚಂದ್ರಯಾನ-3 ನೌಕೆಯಲ್ಲಿರುವ ರೋವರ್‌ ಅನ್ನು ಯಶಸ್ವಿಯಾಗಿ ಇಳಿಸುವುದು ಇಸ್ರೋದ ಮೊದಲ ಗುರಿಯಾಗಿದೆ. ಒಂದು ವೇಳೆ ಚಂದ್ರಯಾನ-3 ಯಶಸ್ವಿಯಾದಲ್ಲಿ ಜಾಗತಿಕವಾಗಿ ಈ ಗುರಿಯನ್ನು ಸಾಧಿಸಿದ 4ನೇ ದೇಶ ಎಂಬ ಹೆಗ್ಗಳಿಕೆ ಭಾರತದ್ದಾಗಲಿದೆ.

LEAVE A REPLY

Please enter your comment!
Please enter your name here