Home ಕರಾವಳಿ 77ನೇ ಸ್ವಾತಂತ್ರ್ಯ ದಿನಾಚರಣೆ: ಪಣಂಬೂರು ಕಡಲ ತೀರದಲ್ಲಿ ಕಲಾವಿದ ಹರೀಶ್ ಆಚಾರ್ಯ ಕೈಯಿಂದ ಮೂಡಿದ ಮರಳು...

77ನೇ ಸ್ವಾತಂತ್ರ್ಯ ದಿನಾಚರಣೆ: ಪಣಂಬೂರು ಕಡಲ ತೀರದಲ್ಲಿ ಕಲಾವಿದ ಹರೀಶ್ ಆಚಾರ್ಯ ಕೈಯಿಂದ ಮೂಡಿದ ಮರಳು ಶಿಲ್ಪ

0

ಮಂಗಳೂರು: 77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಂಗಳೂರಿನ ಪಣಂಬೂರು ಕಡಲ ತೀರದಲ್ಲಿ ಕಲಾವಿದ ಹರೀಶ್ ಆಚಾರ್ಯರವರು ಹೂವು ಹಾಗೂ ಹಸಿರು ಎಲೆಗಳನ್ನು ಬಳಸಿ ರಾಷ್ಟ್ರ ಧ್ವಜವನ್ನು ಮರಳಿನ ಮೇಲೆ ಮೂಡಿಸಿದರು.


ಹುಟ್ಟು ಕಲಾವಿದರಾಗಿರುವ ಹರೀಶ್ ಅವರು ತಮ್ಮ ಕುಲ ವೃತ್ತಿ ಕೆತ್ತನೆ ಕೆಲಸದೊಂದಿಗೆ ಮರಳು ಶಿಲ್ಪ, ಚಿತ್ರಕಲೆ, ಹಾಗೂ ಸುಮಾರು 50 ಕ್ಕು ಹೆಚ್ಚು ಸಿನಿಮಾಗಳಲ್ಲಿ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಹರೀಶ್ ಆಚರ್ಯರವರು ಸುಮಾರು ಐದು ವರ್ಷಗಳಿಂದ ಪಣಂಬೂರು ಕಡಲ ತೀರದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಮರಳು ಶಿಲ್ಪ ರಚಿಸಿ ಸಾರ್ವಜನಿಕರ , ಪ್ರವಾಸಿಗರ ಗಮನ ಸೆಳೆಯುತ್ತಾ ಬಂದಿದ್ದಾರೆ.

LEAVE A REPLY

Please enter your comment!
Please enter your name here