ಕೆಯ್ಯೂರು: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸವಣೂರು ವಿದ್ಯಾರಶ್ಮಿ ಶಾಲೆಯಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಕರಾಟೆ ಸ್ವರ್ದೇಯಲ್ಲಿ ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗದ 8ನೇ ತರಗತಿ ವಿದ್ಯಾರ್ಥಿ ದೃತಿ ಜೆ ರೈ 35ಕೆ.ಜಿ. ಕಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
35ಕೆ.ಜಿ ಕಮಿಟೆ ವಿಭಾಗದಲ್ಲಿ 10ನೇ ತರಗತಿ ವಿದ್ಯಾರ್ಥಿ ಜೀವಿತಾ.ಕೆ, ಮತ್ತು 78ಕೆ.ಜಿ.ಕಮಿಟೆ ವಿಭಾಗದಲ್ಲಿ ಅಗ್ನೇಶ್ ದ್ವೀತಿಯ ಸ್ಥಾನ ಪಡೆದಿರುತ್ತಾರೆ. ದೃತಿ ಜೆ.ರೈ ಕೆಯ್ಯೂರಿನ ಚಾವಡಿತ್ತಾರು ಜತ್ತಪ್ಪ ರೈ ಮತ್ತು ರೇವತಿ ದಂಪತಿಯ ಪುತ್ರಿ, ಜೀವಿತಾ.ಕೆ ಬೊಳಿಕಲ ಕಂಚಿನಪದವು ಗಿರೀಶ ಮತ್ತು ಜಯಂತಿ ದಂಪತಿಯ ಪುತ್ರಿ, ಅಗ್ನೇಶ್ ಕೆಯ್ಯೂರು ರಮೇಶ ಮತ್ತು ಮಲ್ಲಿಕಾ ದಂಪತಿಯ ಪುತ್ರ.ಇವರಿಗೆ ಕರಾಟೆ ಶಿಕ್ಷಕ ಶೇಖರ ಕಂಚಿನಪದವು ತರಬೇತಿ ನೀಡಿರುತ್ತಾರೆ.