ಮಂಗಳೂರು: ಕರ್ನಾಟಕದ ಪ್ರತಿಷ್ಠಿತ ದಿನಪತ್ರಿಕೆ ಕನ್ನಡಪ್ರಭ ಹಾಗೂ ಸುದ್ದಿ ವಾಹಿನಿ ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆಯ ವತಿಯಿಂದ ವೈದ್ಯ ಲೋಕದ ಅಪ್ರತಿಮ ಸಾಧಕರಿಗೆ ನೀಡುತ್ತಿರುವ “ಹೆಲ್ತ್ ಕೇರ್ ಎಕ್ಸೆಲೆನ್ಸ್ ಪ್ರಶಸ್ತಿ 2023” ನಮ್ಮ ಮಂಗಳೂರಿನ ಹೆಸರಾಂತ ಶ್ರೀ ವೇದಂ ಆಯು ಮಲ್ಟಿ ಸ್ಪೆಷಾಲಿಟಿ ಆಯುರ್ವೇದ ಆಸ್ಪತ್ರೆಯ ನಿರ್ದೇಶಕರಾದಡಾ. ಕೇಶವ್ ರಾಜ್ ರವರಿಗೆ ಈ ಭಾರಿ ಲಭಿಸಿದೆ. ಡಾ. ಕೇಶವ್ ರಾಜ್ ಅವರು ಮಂಗಳೂರಿನಲ್ಲಿ ಸುಮಾರು ಹದಿಮೂರು ವರ್ಷಗಳಿಂದ ಆಯುರ್ವೇದ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು ತಮ್ಮದೇ ಆದ ಪದುವ ಶಾಲೆಯ ರಸ್ತೆಯಲ್ಲಿರುವ “ಶ್ರೀ ವೇದಂ ಆಯು ಮಲ್ಟಿ ಸ್ಪೆಷಾಲಿಟಿ ಆಯುರ್ವೇದ” ಆಸ್ಪತ್ರೆಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಈ ವರೆಗೆ ಚಿಕಿತ್ಸೆ ನೀಡಿದ್ದಾರೆ.
ಈ ಆಸ್ಪತ್ರೆಯಲ್ಲಿ ಸಮಾಜದ ಎಲ್ಲಾ ವರ್ಗಗಳಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ, ಇಲ್ಲಿ ವಿಶೇಷವಾಗಿ ಒಳರೋಗಿ ಸೌಲಭ್ಯ , ಯೋಗ ಹಾಗೂ ಪ್ರಾಣಾಯಾಮದ ತರಗತಿ, ಆಹಾರ ಮತ್ತು ಪೌಷ್ಟಿಕಾಂಶದ ಸಮಾಲೋಚನೆ, ಮಾನಸಿಕ ಸಮಾಲೋಚನೆ, ವಿಶೇಷ ಪಂಚ ಕರ್ಮ ಚಿಕಿತ್ಸೆ , ಮಧುಮೇಹ, ಅಧಿಕ ರಕ್ತದೊತ್ತಡ, ನಿದ್ರಾಹೀನತೆ ಸೇರಿ ಚರ್ಮಕ್ಕೆ ಸಂಭದಿಸಿದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಡಾ. ಕೇಶವ್ ರಾಜ್ ಅವರು ಆಯುರ್ವೇದ ಬಿಎಎಂಎಸ್, ಎಂ ಡಿ ಪದವಿ ಹೊಂದಿದ್ದು ಈಗ ಚೆನ್ನೈನ ಜಯೇಂದ್ರ ಸರಸ್ವತಿ ಕಾಲೇಜಿನಲ್ಲಿ ಪಿ ಹೆಚ್ ಡಿ ವ್ಯಾಸಂಗ ಮಾಡುತ್ತಿದ್ದಾರೆ. ಡಾ.ಕೇಶವ್ ರಾಜ್ ರವರ ಅಪ್ರತಿಮ ಸಾಧನೆಯನ್ನು ಗುರುತಿಸಿ ಕನ್ನಡ ಪ್ರಭ ಈ ಪ್ರಶಸ್ತಿ ನೀಡಿದ್ದು ದಕ್ಷಿಣ ಕರ್ನಾಟಕದಲ್ಲಿ ಆಯ್ಕೆಗೊಂಡ ಏಕೈಕ ವ್ಯಕ್ತಿ ಎಂಬುದು ಮಂಗಳೂರಿನ ಜನತೆಗೆ ಹೆಮ್ಮೆಯ ವಿಷಯ.