ಪುತ್ತೂರು: ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿಗಳನ್ನು ಕಂಡು ಹಿಡಿಯುವಂತೆ ಇದೀಗ ದೇವ ಮೊರೆ ಹೋಗಲಾಗಿದ್ದು. ವಿಶ್ವಹಿಂದೂ ಪರಿಷತ್,ಭಜರಂಗದಳದಿಂದ ಪುತ್ತೂರಿನ ಲಕ್ಷೀ ವೆಂಕಟರಮಣ, ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ.
ವಿಶ್ವಹಿಂದೂ ಪರಿಷತ್,ಭಜರಂಗದಳದಿಂದ ಪುತ್ತೂರಿನ ಲಕ್ಷೀ ವೆಂಕಟರಮಣ, ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ಈ ಸಾಮೂಹಿಕ ಪ್ರಾರ್ಥನೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಭಾಗಿಯಾಗಿದ್ದರು.
ಬಳಿಕ ಮಾತನಾಡಿದ ಸೌಜನ್ಯ ತಾಯಿ ಮಾಜಿ ಶಾಸಕ ವಸಂತ ಬಂಗೇರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಬೆಳ್ತಂಗಡಿಯಲ್ಲಿ ನಡೆಯುವ ಪ್ರಕರಣಗಳ ಹಿಂದೆ ಷಡ್ಯಂತ್ರ ಇದೆ, ಸಿಬಿಐ ಗೆ ಪ್ರಕರಣ ಕೊಡಬೇಕೆಂದು ನಮ್ಮನ್ನು ಮುಖ್ಯಮಂತ್ರಿಗಳ ಬಳಿ ವಸಂತ ಬಂಗೇರ ಕರೆದೊಯ್ದಿದ್ದರು, ಸೌಜನ್ಯ ಪ್ರಕರಣದಲ್ಲಿ ಯಾರಿದ್ದಾರೆ,ಯಾರೆಲ್ಲಾ ಆರೋಪಿಗಳಿಗೆ ಸಹಕರಿಸಿದ್ದಾರೆ ಅನ್ನೋದು ವಸಂತ ಬಂಗೇರರಿಗೆ ತಿಳಿದಿದೆ. ಸತ್ಯ ಹೇಳಿದರೆ ಅವರನ್ನು ಸಾಯಿಸುತ್ತಾರೆ ಎಂದೂ ಹೇಳಿದ್ದಾರೆ. ಈ ಎಲ್ಲಾ ಮಾಹಿತಿಯನ್ನು ಸದ್ಯದಲ್ಲೇ ಸಮಾಜದ ಮುಂದೆ ಇಡುತ್ತಾರೆ ಅಂದಿದ್ದಾರೆ. ಸಮಯ ಬಂದಾಗ ಆ ಮಾಹಿತಿಯನ್ನು ಬಂಗೇರರು ನೀಡಲಿದ್ದಾರೆ. ಕೂಡಲೇ ಮಾಹಿತಿಯನ್ನು ಈಗಲೇ ಬಿಡುಗಡೆ ಮಾಡಬೇಕೆಂದು ನಾನು ಒತ್ತಾಯಿಸುತ್ತಿಲ್ಲ, ಕಾನೂನು ಪ್ರಕಾರ ಎಲ್ಲಿ ಹೇಳಬೇಕು ಅಲ್ಲಿ ಅವರು ಹೇಳುತ್ತಾರೆ ಎಂದು ಸೌಜನ್ಯ ತಾಯಿ ಕುಸುಮಾವತಿ ಹೇಳಿದ್ದಾರೆ.