ಪುತ್ತೂರು: ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ವಿಷ್ಣು ಕಲ್ಲುರಾಯರ ಎಂಬವರ ಮನೆಯಿಂದ ಅಡಿಕೆಯನ್ನು ಕದ್ದ ಕಳ್ಳರನ್ನು ಬಂಧಿಸುವಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಪುತ್ತೂರಿನ ನಿವಾಸಿಗಳಾದ ಕಿರಣ್ ಕುಮಾರ್ ಹಾಗೂ ಸಂತೋಷ್ ಎಂದು ಗುರುತಿಸಲಾಗಿದೆ. ಆರೋಪಿಗಲು ಜುಲೈ ತಿಂಗಳಲ್ಲಿ ವಿಷ್ಣುಕಲ್ಲುರಾಯ ಅವರ ಮನೆಯಿಂದ 2 ಕ್ವಿಂಟಾರ ಒಣ ಅಡಿಕೆ ಹಾಗೂ ಹುಲ್ಲು ತೆಗೆಯುವ ಮೇಷಿನ್ ಕಳ್ಳತನ ಮಾಡಿದ್ದರು. ಈ ಕುರಿತಂತೆ ದೂರು ದಾಖಲಾಗಿತ್ತು, ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ 1 ಕ್ವಿಂಟಾಲ್ ಅಡಿಕೆ ಮತ್ತುಹುಲ್ಲು ತೆಗೆಯುವ ಮೇಷಿನ್ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಕಾರನ್ನು ವಶ ಪಡಿಸಿಕೊಂಡಿದ್ದಾರೆ.