
ಬೆಂಗಳೂರು: ಡಾ.ರಾಜಕುಮಾರ್ ಕುಟುಂಬದಲ್ಲಿ ಒಬ್ಬರ ಹಿಂದೊಬ್ಬರಂತೆ ಸಾವು ಸಂಭವಿಸಿರುವುದರಿಂದ ಈ ಕುರಿತು ಅಷ್ಟಮಂಗಲ ಪ್ರಶ್ನೆ ಕೇಳಲಿರುವ ಮಾಹಿತಿಯೊಂದು ಹೊರಬಿದ್ದಿದೆ. ಈಡಿಗ ಸಮುದಾಯ ಶ್ರೀಪ್ರಣವಾನಂದ ಸ್ವಾಮೀಜಿ ಈ ಕುರಿತು ವಿಷಯ ತಿಳಿಸಿದ್ದಾರೆ.




ಸ್ಪಂದನಾ ಅಂತಿಮಸಂಸ್ಕಾರದ ವಿಧಿ-ವಿಧಾನ ಕುರಿತು ವಿವರಣೆ ನೀಡುತ್ತಿದ್ದ ವೇಳೆ ಅವರು ಈ ವಿಷಯ ತಿಳಿಸಿದರು.


ಡಾ.ರಾಜ್ ಕುಟುಂಬದಲ್ಲಿ ಪುನೀತ್ ರಾಜಕುಮಾರ್ ಮತ್ತು ಸ್ಪಂದನಾ ಇಬ್ಬರೂ ಸಣ್ಣವಯಸ್ಸಿನಲ್ಲೇ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತು ನಾವು ಶಿವರಾಜ್ ಕುಮಾರ್ ಅವರ ಜೊತೆಗೆ ಈಗಾಗಲೇ ಮಾತಾಡಿದ್ದೇವೆ ಎಂದು ಪ್ರಣವಾನಂದಶ್ರೀ ತಿಳಿಸಿದರು.ಡಾ.ರಾಜ್ ಕುಟುಂಬದಲ್ಲಿ ಯಾಕೆ ಈ ರೀತಿ ಅಕಾಲ ಮೃತ್ಯು ಸಂಭವಿಸುತ್ತಿದೆ ಎಂದು ತಿಳಿದುಕೊಳ್ಳಲು ಮುಂದಾಗುತ್ತೇವೆ, ಅದರ ಮುಂದಾಳತ್ವ ನಾನು ವಹಿಸುತ್ತೇನೆ. ಇದಕ್ಕಾಗಿ ಈಡಿಗ ಸಮುದಾಯದ ಕೇರಳದ ತಂತ್ರಿಗಳ ಕಡೆಯಿಂದ ಅಷ್ಟಮಂಗಲ ಪ್ರಶ್ನೆ ಹಾಕಿ ಕೇಳಬೇಕು. 41 ದಿನಗಳ ನಂತರ ಕೇರಳದ ಉನ್ನತ ತಂತ್ರಿಗಳ ಬಳಿ ಹೋಗಿ ಅಷ್ಟಮಂಗಲ ಪ್ರಶ್ನೆ ಕೇಳುವ ಮೂಲಕ ಕಾರಣ ತಿಳಿದುಕೊಳ್ಳಲು ಪ್ರಯತ್ನಿಸುವುದಾಗಿ ಅವರು ಹೇಳಿದರು.