ದಿನಾಂಕ 23/07/2023 ರಂದು ಭಾನುವಾರ ಶ್ರೀ ಸಾಯಿ ಕಲ್ಯಾಣ ಮಂಟಪ ಬಾಗಲಗುಂಟೆ ಬೆಂಗಳೂರು.ಕರ್ನಾಟಕ ಜನಸ್ಪಂದನ ಟ್ರಸ್ಟ್ (ರಿ) ಕರ್ನಾಟಕ ರಾಜ್ಯ ಸಂಸ್ಥೆ ಟಿ.ದಾಸರಹಳ್ಳಿ ಬೆಂಗಳೂರು, ಹನುಮಂತಪ್ಪ ಮೇಡೆಗಾರ ರಾಜ್ಯಾಧ್ಯಕ್ಷರು ಇವರು ಹಮ್ಮಿಕೊಂಡ ಟ್ರಸ್ಟಿನ 6 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. .ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಶ್ರೀ ಪರಮಪೂಜ್ಯ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಮಸೂತಿ
ವಿಜಯಪುರ ಜಿಲ್ಲೆ ಇವರು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದರು
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯ ವ್ಯಕ್ತಿಗಳು
ಮಾನ್ಯ ಶ್ರೀ ಎಸ್ ಮುನಿರಾಜು ಶಾಸಕರು ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರ, ಶಿಕಾರಿಪುರ ಕ್ಷೇತ್ರದ ಬಿ,ವೈ,ವಿಜಯೇಂದ್ರ,
ಶ್ರೀ ವೈ ಬಿ ಎಚ್ ಜಯದೇವ್. ಅಧ್ಯಕ್ಷರು. ಕನ್ನಡ ಜನಪದ ಪರಿಷತ್ತು. ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರ, ಇವರ ಎಲ್ಲರ ಸಮ್ಮುಖದಲ್ಲಿ “ಅಪೂರ್ವ” ಇವರಿಗೆ ಜನಸ್ಪಂದನ ಕಲಾಸಿರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲಾವಿದರ ರಕ್ಷಣಾ ವೇದಿಕೆ (ರಿ) ಬೆಂಗಳೂರು ಇವರು ಆಯೋಜಿಸಿದ ರಾಜ್ಯ ಮಟ್ಟದ ಸಾಂಸ್ಕೃತಿಕ ಉತ್ಸವ -2023 ದಲ್ಲಿ ರಾಜ್ಯ ಮಟ್ಟದ ಬಾಲ ಪ್ರತಿಭಾ ರತ್ನ ಪ್ರಶಸ್ತಿ ಪಡೆದಿರುತ್ತಾರೆ
ಇವರು ಅಕ್ಷತ ಮತ್ತು ಅಶೋಕ್ ದಂಪತಿಗಳ ಮುದ್ದಿನ ಮಗಳಾದ ಅಪೂರ್ವ ಕಾರ್ಕಳ ದ ಕ್ರೈಸ್ಟ್ ಕಿಂಗ್ ಇಂಗ್ಲೀಷ್ ಮೀಡಿಯಮ್ ಶಾಲೆಯಲ್ಲಿ 6 ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.
ಎಲ್ಲರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಅಂತರ್ಗತವಾಗಿರುತ್ತದೆ.ಅದು ಹುಟ್ಟಿನಿಂದಲೇ ವಿಕಾಸಗೊಳ್ಳುತ್ತಾ ಬರುತ್ತದೆ.ಪ್ರತಿಭಾ ವಿಕಾಸಕ್ಕೆ ವೇದಿಕೆ,ಪ್ರೋತ್ಸಾಹ ಅತ್ಯಗತ್ಯ.
ಅದನ್ನು ಅನಾವರಣಗೊಳಿಸಲು ಯೋಗ್ಯ ಗುರುಗಳ ಆಶೀರ್ವಾದವೂ ಅಗತ್ಯ. ಈ ಬಾಲಪ್ರತಿಭೆ ತನ್ನ ಬಹುಮುಖ ಸಾಧನೆಗಳೊಂದಿಗೆ ಬೆಳಗುತ್ತಿದ್ದಾಳೆ.ಇವಳೇ ಅಪೂರ್ವ ಮಾಲಾ ಅವಕಾಶಗಳ ಸದುಪಯೋಗದೊಂದಿಗೆ ಸಾಂಸ್ಕೃತಿಕ ಲೋಕದಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾಳೆ. ಇವಳ ಸಾಧನೆಯ ಹಾದಿಯಲ್ಲಿ ಸದಾ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುತ್ತಿರುವವರು ತಂದೆ ತಾಯಿ, ಅಜ್ಜ ಅಜ್ಜಿ ಶಾಲಾ ಮುಖ್ಯೋಪಾಧ್ಯಾಯರು ಮೆರಿಯನ್ ಡಿ ಸೋಜಾ, ಶಾಲಾ ಶಿಕ್ಷಕರು ಹಾಗೂ ಶುಭದ್ರವ್ ,ಕಲಾತ್ಮಕ ಜಗತ್ತು ನಾಗೇಶ್ ಬೆಳ್ಳಾರೆ,ಆಮಂತ್ರಣ ವಿಜಯ್ ಕುಮಾರ್ ಜೈನ್ ಮತ್ತು ವಿಜಯ ಮುಂಡ್ಲಿ , ಪ್ರಕಾಶ್ ಹಿತೈಷಿಗಳ ಪ್ರೋತ್ಸಾಹವಿದೆ.
ಕೇವಲ ಮೊಬೈಲ್ ನಲ್ಲಿ ಗೇಮ್ಸ್ ಎಂದು ಕಾಲಹರಣ ಮಾಡದೆ ತನ್ನ ಅವಿರತ ಪ್ರಯತ್ನದ ಮೂಲಕ ವಿಶೇಷವಾಗಿ ಬೆಳಗುತ್ತಿರುವ ಪ್ರತಿಭೆ
ಯಾವುದೇ ಬೇರೆ ಗುರುಗಳಿಲ್ಲದೆ ಕೇವಲ ಯೂಟ್ಯೂಬ್ ನೋಡಿ ನೃತ್ಯ ಅಭಿನಯವನ್ನು ಕಲಿತಿದ್ದಾಳೆ ಮೊದಲು ಶಾಲೆಯಲ್ಲಿನ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಳು ನಂತರ ಬೇರೆ ಬೇರೆ ಸ್ಪರ್ಧೆಗಳಲ್ಲಿ ಅಂದರೆ ನೃತ್ಯ ನಾಟಕ ಛದ್ಮವೇಷ ಯೋಗ ಚಿತ್ರಕಲೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ಕೋವಿಡ್ ಸಮಯದಲ್ಲೂ ಈ ಪ್ರತಿಭೆ ಕೈಕಟ್ಟಿ ಕೂರದೆ ಅನೇಕ ಆನ್ಲೈನ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾಳೆ. ಅದರಲ್ಲಿ ಜೆಸಿಐ ಅವರ ನಡೆಸಿದ ಆನ್ಲೈನ್ ಡ್ಯಾನ್ಸ್ ಕಾಂಪಿಟೇಶನ್ ನಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ ಕೇವಲ ಪ್ರಶಸ್ತಿ ಗಳಿಸುವುದಲ್ಲದೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಈಕೆ ಗೆದ್ದಿರುವ ಮೊತ್ತವನ್ನು ಅಂಗವಿಕಲ ಮಕ್ಕಳಿಗೆ ನೀಡುತ್ತಾಳೆ. ಹೀಗೆ ಅನೇಕ ಬಾರಿಗೆ ಪ್ರಶಸ್ತಿಯ ಮೊತ್ತವನ್ನು ಅನೇಕ ಬಡವರಿಗೆ ನೀಡಿರುತ್ತಾಳೆ .
ಅಪೂರ್ವ ಳ ಭವಿಷ್ಯದಲ್ಲಿ ರಾಜ್ಯ-ರಾಷ್ಟ್ರದಲ್ಲೇ ಮಿಂಚುವ ಕಲಾ ಸಾಧಕಿಯಾಗಲೆಂದು ಹಾರೈಸೋಣ