![](https://i0.wp.com/prakharanews.com/wp-content/uploads/2025/01/WhatsApp-Image-2025-01-21-at-12.33.45-PM-scaled.jpeg?fit=2048%2C2560&ssl=1)
ಕುಂದಾಪುರ: ಕಳೆದ ಭಾನುವಾರ ಮನೆಯಿಂದ ನಾಪತ್ತೆಯಾಗಿದ್ದ ಬೈಂದೂರು ತಾಲೂಕು ಜಡ್ಕಲ್ ಗ್ರಾಮ ಕೊಳಕೆಹೊಳೆ ಮೆಕ್ಕೆ ನಿವಾಸಿ ಮಂಜ ಎಂಬುವರ ಮಗ ಸುರೇಶ (28) ಶವವಾಗಿ ಪತ್ತೆಯಾಗಿದ್ದಾನೆ. ಶನಿವಾರ ಸಂಜೆ ಜಡ್ಕಲ್ ಸಮೀಪದ ಹಯ್ಯಂಗಾರ್ ಎಂಬಲ್ಲಿ ಹಾಸ್ಕಲ್ ಸಮೀಪದ ಹೊಳೆಯಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಕಂಡು ಬಂದಿದೆ. ಸುರೇಶನಿಗೆ ಆಗಾಗ ಮನೆ ಸಮೀಪವೇ ಹರಿಯುವ ಹೊಳೆ ಬದಿಯಲ್ಲಿ ಬಂದು ಗಂಟೆಗಟ್ಟಲೆ ಕುಳಿತುಕೊಂಡು ಹೊಳೆಯನ್ನೇ ದಿಟ್ಟಿಸಿ ನೋಡುವ ಕೆಟ್ಟ ಅಭ್ಯಾಸವಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆಯೂ ಎದ್ದು ಹಾಗೇ ಕುಳಿತಿರಬಹುದು ಎನ್ನಲಾಗಿದ್ದು, ವಿಪರೀತ ಮಳೆಯೂ ಇದ್ದಿದ್ದರಿಂದ ಹೊಳೆಗೆ ಬಿದ್ದಿರುವ ಸಾಧ್ಯತೆಯಿರಬಹುದು ಎಂದು ಶಂಕಿಸಲಾಗಿದೆ. ಕಳೆದ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಸುರೇಶ ಮನವರೊಂದಿಗೆ ಸೇರಿಕೊಂಡು ಊಟ ಮಾಡಿ ಮಲಗಿದ್ದ. ಆದರೆ ಮನೆಯವರು ಬೆಳಿಗ್ಗೆ ಎದ್ದು ನೋಡುವಾಗ ಸುರೇಶ್ ನಾಪತ್ತೆಯಾಗಿದ್ದ.
![](https://i0.wp.com/prakharanews.com/wp-content/uploads/2025/01/WhatsApp-Image-2025-01-22-at-5.17.51-PM.jpeg?fit=1157%2C1600&ssl=1)
![](https://i0.wp.com/prakharanews.com/wp-content/uploads/2025/01/WhatsApp-Image-2025-01-23-at-5.27.18-PM.jpeg?fit=681%2C706&ssl=1)
![](https://i0.wp.com/prakharanews.com/wp-content/uploads/2025/01/girija-1.jpg?fit=1158%2C1756&ssl=1)