ಬೆಂಗಳೂರು: ರಾಜ್ಯದ ಕುಟುಂಬದ ಯಜಮಾನಿ ಮಹಿಳೆಯರಿಗೆ 2000 ರೂ ಪ್ರತಿ ತಿಂಗಳು ನೀಡುವಂತ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಆರಂಭಗೊಂಡಿದೆ. ಆದರೇ ಸರ್ವರ್ ಸಮಸ್ಯೆಯಿಂದಾಗಿ ನೋಂದಣಿ ತಡವಾಗುತ್ತಿದೆ. ಪ್ರತಿ ಸೇವಾ ಕೇಂದ್ರಗಳಲ್ಲಿ ಮಹಿಳೆಯರು ಸಾಲುಗಟ್ಟಿ ನಿಲ್ಲುತ್ತಿರೋದು ಕಂಡು ಬಂದಿದೆ.
ಇಂತಹ ಯಜಮಾನಿ ಮಹಿಳೆಯರು ಹಾಗೆ ನಿಲ್ಲೋ ಮುನ್ನ ನಿಮ್ಮ ನೋಂದಣಿಗೆ ಯಾವಾಗ ಹೋಗಬೇಕು.? ಅರ್ಜಿ ಸಲ್ಲಿಕೆಗೆ ನೋಂದಣಿ ಹೇಗೆ ಎನ್ನುವ ಬಗ್ಗೆ ಮುಂದೆ ಓದಿ.
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಆರಂಭಗೊಂಡ ನಂತ್ರ, ರಾಜ್ಯದ ಯಜಮಾನಿ ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಾಯವಾಣಿ ಸಂಖ್ಯೆಯನ್ನು ಕೂಡ ಬಿಡುಗಡೆ ಮಾಡಲಾಗಿತ್ತು. ಅಲ್ಲದೇ ಆಧಾರ್ ಕಾರ್ಡ್ ಲಿಂಕ್ ಆಗಿರುವಂತ ಮೊಲೈಲ್ ನಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿದಂತ ಸಂಖ್ಯೆ ಒಂದಕ್ಕೆ ಎಸ್ ಎಂ ಎಸ್ ಕಳುಹಿಸಿಯೂ ನೋಂದಣಿಯ ಬಗ್ಗೆ ಮಾಹಿತಿ ಪಡೆಯಬಹುದು. ಅದಕ್ಕೂ ರಿಪ್ಲೆ ಬರಲಿಲ್ಲ ಅಂದರೆ ಏನು ಮಾಡಬೇಕು ಅಂತ ಕೆಳಗಿದೆ ಓದಿ. ಅದರಂತೆ ಅನುಸರಿಸಿ.
ಮೊದಲಿಗೆ ಮನೆಯ ಯಜಮಾನನ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್‌ನಿಂದ 8147500500 ಈ ಸಂಖ್ಯೆಗೆ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು SMS ಮೂಲಕ ಕಳುಹಿಸಬೇಕು. ಆಗ ನಿಮಗೊಂದು ಮೆಸೇಜ್ ಬರುತ್ತದೆ.
ಮೆಸೇಜ್ ಬಾರದಿದ್ದರೆ ಅದು ಸರ್ವರ್ ಸಮಸ್ಯೆ. ಹೀಗಾಗಿ ಮತ್ತೆ ನೀವು ಸಂದೇಶ ಕಳುಹಿಸಬೇಕು. ನಿಮ್ಮ ಮೆಸೇಜ್‌ಗೆ ರಿಫ್ಲೈ ಬರದಿದ್ದರೆhttps://sevasindhugs1.karnataka.gov.in/gl-stat-sns/ಪಡಿತರ ಚೀಟಿ ಸಂಖ್ಯೆ, ಕ್ಯಾಪ್ಟಾ ನಮೂದಿಸಿ ನೀವು ಅರ್ಜಿ ಸಲ್ಲಿಸುವ ವೇಳಾಪಟ್ಟಿ ಚೆಕ್ ಮಾಡಬಹುದು.