ಪುತ್ತೂರು: ಅಡಿಕೆ,ತೆಂಗು,ಮರ ಮತ್ತು ಇನ್ನಿತರ ಕಾರಣಗಳಿಂದ ಮೂಲೆ ಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ,ಮನೆಯಲ್ಲಿ ಮಲಗಿದ್ದಲ್ಲೇ ಇರುವವರಿಗೆ ಸರಕಾರ ಮಾಸಾಶನ ನೀಡಬೇಕು, ಅವರು ಅತ್ತ ಸಾವೂ ಇಲ್ಲ ಇತ್ತ ಬದುಕೂ ಇಲ್ಲ ಎಂಬಂತೆ ಅವರ ಜೀವನ ಇದೆ ಅವರಿಗೆ ನೆರವಾಗಲು ಮಾಸಾಶನ ಕೊಡಬೇಕಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಸೀಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿಕೊಂಡರು.
ಮಂಗಳೂರಿನ ಜಿಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ಮಾನವೀಯತೆ ನೆಲೆಯಲ್ಲಿ ಅವರಿಗೆ ಬದುಕಲು ಸಹಾಯ ಮಾಡಬೇಕು, ಇಂಥವರು ಬಹುತೇಕ ಬಡವರೇ ಆಗಿದ್ದಾರೆ, ಅವರಿಗೆ ಸಹಾಯ ಮಾಡಿದರೆ ನಮಗೆ ,ನಮ್ಮ ಸರಕಾರಕ್ಕೆ ಪುಣ್ಯ ಬರುತ್ತದೆ ಎಂದು ಸೀಎಂ ಬಳಿ ಕೇಳಿಕೊಂಡರು. ಶಾಸಕರು ಈ ವಿಚಾರವನ್ನು ಹೇಳುವಾಗ ಸಿದ್ದರಾಮಯ್ಯ ಅವರೂ ಒಂದು ಕ್ಷಣ ಮೌನವಾದರು, ಶಾಸಕರು ಹೇಳಿದ ವಿಚಾರ ಸೀಎಂ ಮನಸ್ಸಿನಲ್ಲಿ ಬೇಸರವಾದಂತೆ ಕಂಡು ಬಂತು, ತಕ್ಷಣವೇ ಈ ವಿಚಾರದ ಬಗ್ಗೆ ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದರು. ಇದೇ ವಿಚಾರವನ್ನಹ ವಿಧಾನಸಭಾ ಅಧಿವೇಶನದಲ್ಲಿ ಶಾಸಕರು ಸೀಎಂ ಗಮನಕ್ಕೆ ತಂದಿದ್ದರು.