ಬೆಳ್ತಂಗಡಿ: ರಂಗ್ ದ ರಾಜೆ ಸುಂದರ್ ರೈ ರಚನೆ,ನಿರ್ಮಾಣ, ಪ್ರಧಾನ ನಿರ್ದೇಶನದ ಹಾಗೂ ಪ್ರಜ್ವಲ್ ಕುಮಾರ್ ಅತ್ತಾವರ ಸಂಚಿಕೆ ನಿರ್ದೇಶನದ ತುಳು ಹಾಸ್ಯ ಧಾರಾವಾಹಿ “ಅಂಬರ ಮರ್ಲೆರ್ ತುಳು ಹಾಸ್ಯ ಧಾರಾವಾಹಿಯ ಹೊಸ ಅವತರಣಿಕೆಯ ಫರ್ಸ್ಟ್ ಲುಕ್ ಪೋಸ್ಟರ್ ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಆರಿಕೋಡಿ ಇದರ ಧರ್ಮದರ್ಶಿಗಳಾದ ಶ್ರೀ ಶ್ರೀ ಹರೀಶ್ ಆರಿಕೋಡಿ ಅವರ ದಿವ್ಯ ಹಸ್ತದಿಂದ ಬಿಡುಗಡೆಗೊಳಿಸಿದರು.
“ಅಂಬರ ಮರ್ಲೆರ್” ತುಳು ಹಾಸ್ಯ ಧಾರಾವಾಹಿ ಈಗಾಗಲೇ ಕಿರುತೆರಯಲ್ಲಿ ಬಿಡುಗಡೆಗೆ ತಯಾರಾಗಿದ್ದು ಅತೀ ಶೀಘ್ರದಲ್ಲಿ ಜನರ ನೆಚ್ಚಿನ ವಾಹಿನಿಯಲ್ಲಿ ಬಿಡುಗಡೆಗೊಳ್ಳಲಿದೆ ಎಂದು ನಿರ್ದೇಶಕರು ತಿಳಿಸಿದರು.
ಈ ಸಂಧರ್ಭದಲ್ಲಿ ಸುಂದರ್ ರೈ ಮಂದಾರ, ನಟ ದೀಪಕ್ ರೈ ಪಾಣಾಜೆ, ಪ್ರಜ್ವಲ್ ಕುಮಾರ್ ಅತ್ತಾವರ, ಛಾಯಾಗ್ರಾಹಕರಾದ ಧನರಾಜ್ ರೈ , ಚಂದ್ರ ಗೇರುಕಟ್ಟೆ ಮತ್ತಿರರು ಉಪಸ್ಥಿತರಿದ್ದರು.
ಈ ಧಾರಾವಾಹಿಯಲ್ಲಿ ತುಳು ಹಾಗೂ ಕನ್ನಡ ಚಿತ್ರರಂಗದ, ರಂಗಭೂಮಿಯ ಹೆಸರಾಂತ ಹಾಸ್ಯ ಕಲಾವಿದರು ಪಾತ್ರ ನಿರ್ವಹಿಸಿದ್ದಾರೆ.
ಮಜಾ ಟಾಕೀಸ್ ನ ಗುಂಡು ಮಾಮ ಖ್ಯಾತಿಯ ನವೀನ್ ಡಿ ಪಡೀಲ್, ಕಾಂತಾರ ಖ್ಯಾತಿಯ ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರ್ ಹಾಗೇಯೇ ತುಳು ನಾಟಕ ರಂಗ, ಚಿತ್ರ ರಂಗದ ದಿಗ್ಗಜರಾದ ಸುಂದರ್ ರೈ ಮಂದಾರ,ಉಮೇಶ್ ಮಿಜಾರ್,ಅರುಣ್ ಚಂದ್ರ ಬಿ. ಸಿ ರೋಡ್, ರಾಜೇಶ್ ಮೀಯಪದವು, ರಂಜನ್ ಬೋಳೂರು,ಸೋಮನಾಥ ಶೆಟ್ಟಿ ಮಂಗಲ್ಪಾಡಿ,ರವಿ ರಾಮಕುಂಜ, ಸುನಿಲ್ ನೆಲ್ಲಿ ಗುಡ್ಡೆ,ರೂಪ ವರ್ಕಾಡಿ, ನಮಿತಾ ಕಿರಣ್, ಪ್ರತ್ವಿನ್ ಪೊಳಲಿ ಹಾಗೂ 75 ಕ್ಕೂ ಹೆಚ್ಚೂ ತುಳು ನಾಟಕ ಹಾಗೂ ಸಿನಿಮಾ ಕಲಾವಿದರು ಅಭಿನಯಿಸಿದ್ದಾರೆ.
ಅಂಬರ ಮರ್ಲೆರ್ ಧಾರಾವಾಹಿಗೆ ಕುಸಲ್ದ ಮುತ್ತು ಅರುಣ್ ಚಂದ್ರ ಬಿ.ಸಿ ರೋಡ್, ಸೋಮನಾಥ ಶೆಟ್ಟಿ ಮಂಗಲ್ಪಾಡಿ ಹಾಗೂ ನಿತಿನ್ ಹೊಸಂಗಡಿ ಸಂಭಾಷಣೆ ಬರೆದಿದ್ದು ತಂತ್ರಜ್ಞರ ತಂಡದಲ್ಲಿ ಮುಖ್ಯ ಛಾಯಾಗ್ರಾಹಕ ಹಾಗೂ ಸಂಕಲನಕಾರ ಧನರಾಜ್ ರೈ ಪುತ್ತೂರು, ಸಹ ಛಾಯಾಗ್ರಾಹಕರಾಗಿ ಸಂಜು ನಾರಾಯಣ, ಆಶೋಕ್ ಬೇಕೂರು, ಹಿನ್ನಲೆ ಸಂಗೀತ ಗುರು ಬಾಯಾರ್,ಸಾಹಿತ್ಯ ಉಮೇಶ್ ಮಿಜಾರ್ , ಗಾಯನ ಸೋಮನಾಥ ಶೆಟ್ಟಿ ಮಂಗಲ್ಪಾಡಿ, ಸಹ ನಿರ್ದೇಶನ ರವಿ ಎಂ ಎಸ್ ವರ್ಕಾಡಿ, ಪ್ರಸಾದನ ಪ್ರಸಾದ್ ಕೊಯಿಲ, ಪ್ರಚಾರ ಕಲೆ ಗಣೇಶ್.ಕೆ,ಕಲೆ ಹಾಗೂ ನಿರ್ಮಾಣ ನಿರ್ವಹಣೆ ವಿಜಯ್ ಮಯ್ಯ ಐಲ ,ಬೆಳಕು ಯುನಿಟ್ ರಾಜ್ ಪ್ರೊಡಕ್ಷನ್ಸ್, ಬೆಳಕು ಸಹಾಯಕರಾಗಿ ಪ್ರಜ್ವಲ್ ಆಚಾರ್ಯ, ಪವನ್ ಕುಮಾರ್, ನವೀನ್ ಕಾರ್ಯನಿರ್ವಹಿಸಿದ್ದಾರೆ.