
ತಾಂತ್ರಿಕ ದೋಷದಿಂದ ಇಂದು ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ಸರ್ವರ್ ಬಂದ್ ಆಗಿದೆ ಎಂದು ರಾಜ್ಯ ಸರ್ಕಾರ ಸೆರ್ಕ್ಯುಲೇಶನ್ ಹೊರಡಿಸಿದೆ.



ಆದರೆ ಹುಬ್ಬಳ್ಳಿಯಲ್ಲಿ ಇದರ ಕುರಿತು ಸಾರ್ವಜನಿಕರು ರಾಜ್ಯ ಸರ್ಕಾರ ಹೋರಡಿಸಿರುವ ಸೇರ್ಕ್ಯುಲಶನ್ ಕುರಿತು ತಿಳಿದುಕೊಳ್ಳದೆ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದಾರೆ.ಬೇಕಂತಲೇ ಕರ್ನಾಟಕವನ್ನು ಬಂದ್ ಮಾಡಲಾಗಿದೆ ಎಂದು ಸಾರ್ವಜನಿಕರು ಕೇಂದ್ರದ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದಾರೆ.


ಹುಬ್ಬಳ್ಳಿಯ ವೀರಾಪುರ್ ಓಣಿಯಲ್ಲಿ ಈ ಘಟನೆ ನಡೆದಿದ್ದು, ಸಿಬ್ಬಂದಿ ಜೊತೆ ಮಾತಿನ ವಾಗ್ವಾದ ನಡೆದು ಸಿಬ್ಬಂದಿ ಪ್ರಿಯಾಂಕಾ ವಾಂಕರ್ ಹಾಗೂ ಸೆಕ್ಯೂರಿಟಿ ಕಿರಣ್ ಮೇಲೆ ಸಾರ್ವಜನಿಕರು ಹಲ್ಲೆ ಮಾಡಿದ್ದಾರೆ. ತಾಂತ್ರಿಕ ದೋಷವಿದೆ ಎಂದು ಕೇಂದ್ರದ ಹೊರಗೆ ನೋಟಿಸ್ ಹಾಕಿದರು ಸಹ ಗಮನಿಸದೆ ಹಲ್ಲೆ ನಡೆಸಿದ್ದಾರೆ.ಎಂದು ಅವರು ಆರೋಪಿಸಿದ್ದಾರೆ.ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಸುಮಾರು 300ಕ್ಕೂ ಹೆಚ್ಚು ಜನರು ಆಗಮಿಸಿದ್ದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಕರ್ನಾಟಕ ಒನ್ ಕೇಂದ್ರಕ್ಕೆ ಬೀಗ ಹಾಕಿದ್ದಾರೆ.ಮುಂಜಾಗ್ರತ ಕ್ರಮವಾಗಿ ಅಲ್ಲಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.