ಬೆಳ್ತಂಗಡಿ: ಬಜಿರೆ ಗ್ರಾಮದ ಬಾಡಾರು ಕೊರಂಗಲ್ಲುವಿನಲ್ಲಿ ಅನಾದಿ ಕಾಲದಿಂದ ಆಚರಿಸಿಕೊಂಡು ಬರುತ್ತಿದ್ದ ಕೊರಗಜ್ಜನ ಗುಡಿಗೆ ಕಿಡಿಗೇಡಿಗಳು ಬೆಂಕಿಯಿಟ್ಟಿರುವ ಘಟನೆ ನಡೆದಿದೆ.
ಜನವರಿಯಲ್ಲಿ ವರ್ಷಂಪ್ರತಿ ಬೆಳ್ತಂಗಡಿ-ಬಂಟ್ವಾಳ ತಾಲೂಕು ಗಡಿ ಭಾಗದಲ್ಲಿರುವ ಇಲ್ಲಿಯ ಬಾಡಾರುವಿನಲ್ಲಿ ದೊಂಪದಬಲಿ ಉತ್ಸವ ಜರಗಿದ ಮರುದಿನ ಈ ಕೊರಗಜ್ಜನ ಗುಡಿಯಲ್ಲಿ ಸಾರ್ವಜನಿಕವಾಗಿ ನೇಮೋತ್ಸವ ನಡೆಯುತ್ತ ಬರುತ್ತಿತ್ತು ಎನ್ನಲಾಗಿದೆ. ಗುಡಿಯ ಜಾಗದ ವಿಚಾರ ಮತ್ತು ಆಡಳಿತದ ವಿಚಾರದಲ್ಲಿ ತಗಾದೆಗಳು ನಡೆಯುತ್ತಿತ್ತು ಎನ್ನಲಾಗಿದೆ. ಇದೀಗ ಆರಾಧ್ಯ ಶಕ್ತಿ ಗುಡಿಗೆ ಬೆಂಕಿ ಇಟ್ಟಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದ್ದು, ತನಿಖೆಯಿಂದಷ್ಟೇ ಖಚಿತ ಮಾಹಿತಿ ತಿಳಿದು ಬರಬೇಕಿದೆ.