ನಿಧನದಿಂದ ತೆರವಾಗಿರುವ ಆರ್ಯಾಪು ಗ್ರಾಮ ಪಂಚಾಯತ್ ನ ಉಪಚುನಾವಣೆಗೆ ಪುತ್ತಿಲ ಪರಿವಾರದಿಂದ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ಆರ್ಯಾಪು ಗ್ರಾಮ ಪಂಚಾಯತ್ ನಲ್ಲಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಮಾರ್ತಾ, ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ವೀರಮಂಗಲ, ಪ್ರಮುಖರಾದ ಶ್ರೀಮತಿ ವಾಣಿಶ್ರೀ, ಶ್ರೀಮತಿ ಶ್ರೀಕರಿ, ನವೀನ್ ರೈ ಮೇಗಿನಪಂಜ, ಜಗದೀಶ್ ಪೂಜಾರಿ, ನಾರಾಯಣ ಕುಲಾಲ್, ತಿಮ್ಮಪ್ಪ ನಾಯ್ಕ್ ಕುಂಜುರುಪಂಜ, ಗೋಪಾಲ ಭಟ್ , ತಾರಾನಾಥ, ಸಂತೋಷ್ ಭಂಡಾರಿ, ಪವಿತ್ರ, ಸೀತಾರಾಮ ಶೆಟ್ಟಿ, ಕೃಷ್ಣ ಪ್ರಸಾದ್ ಶೆಟ್ಟಿ ಮೊದಲಾದರು ಉಪಸ್ಥಿತರಿದ್ದರು.