Home ತಾಜಾ ಸುದ್ದಿ ಆಗಸ್ಟ್ 24 ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿರುವ ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ

ಆಗಸ್ಟ್ 24 ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿರುವ ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ

0

ಬೆಂಗಳೂರು; ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ತಮ್ಮ ಸಂಬಂಧಕ್ಕೆ ಮದುವೆಯೆಂಬ ಮುದ್ರೆ ಒತ್ತಲು ನಿರ್ಧರಿಸಿದ್ದಾರೆ. ಅದರಂತೆ ಅವರ ವಿವಾಹಕ್ಕೆ ಇದೀಗ ದಿನಾಂಕ ನಿಗದಿಯಾಗಿದೆ. ಯೆಸ್.. ಆಗಸ್ಟ್ 24 ರಂದು ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಕೊಡವ ಸಂಪ್ರದಾಯದಂತೆ ಈ ಮದುವೆ ನಡೆಯಲಿದ್ದು, ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಮದುವೆ ಲಗ್ನಪತ್ರಿಕೆ ವೈರಲ್ ಆಗಿದೆ. ಕೊಡಗಿನ ಇಗ್ಗುತ್ತಪ್ಪ ದೇವಾಲಯದಲ್ಲಿ ಲಗ್ನಪತ್ರಿಕೆ ಕಾರ್ಯ ಸರಳವಾಗಿ ನಡೆದಿದೆ. ಆಗಸ್ಟ್ 24 ರಂದು ಅಮ್ಮತ್ತಿಯ ಕೊಡವ ಸಮಾಜದಲ್ಲಿ ವಿವಾಹ ನಡೆಯಲಿದೆ. ಕೋವಿಡ್‌ ಸಮಯ ಸೇರಿದಂತೆ ಹಲವಾರು ಸಾಮಾಜಮುಖಿ ಕೆಲಸಗಳಲ್ಲಿ ಈ ಜೋಡಿ ನಿರತವಾಗಿತ್ತು.  ಇದೀಗ ಸಪ್ತಪದಿ ತುಳಿಯುವ ಮೂಲಕ ಜೀವನದುದ್ದಕ್ಕೂ ಒಂದಾಗಲಿದೆ.


LEAVE A REPLY

Please enter your comment!
Please enter your name here