Public relations meeting held by Electricity Department at Hanur.
ವರದಿ : ಬಂಗಾರಪ್ಪ ಸಿ ಹನೂರು .
ಹನೂರು :ರೈತರು ಮತ್ತು ಸಾರ್ವಜನಿಕರು ಹಾಗೂ ಗ್ರಾಹಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಉದ್ದೇಶದಿಂದ ಪಟ್ಟಣದ ಚೆಸ್ಕಾಂ ಕಚೇರಿ ಆವರಣದಲ್ಲಿ ಕಾರ್ಯಪಾಲಕ ಎಂಜಿನಿಯರ್ ಶಹಿದಾ ಸಿದ್ದೀಕ್ ರವರ ಅಧ್ಯಕ್ಷತೆಯಲ್ಲಿ ಜನ ಸಂಪರ್ಕ ಸಭೆಯನ್ನು ಆಯೋಜಿಸಲಾಯಿತು.
ನಂತರ ಮಾತನಾಡಿದ ತಾಲ್ಲೂಕು ರೈತ ಮುಖಂಡ ಚಂಗಡಿ ಕರಿಯಪ್ಪ ನಮ್ಮ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾಡಂಚಿನ ಗ್ರಾಮಗಳಲ್ಲಿ ವಾಸಿಸುತ್ತಿದ್ದು ಅಲ್ಲಿನ ಜನರಿಗೆ ವಿದ್ಯುತ್ ಸರಬರಾಜು ಮಾಡಲು ಅರಣ್ಯ ಇಲಾಖೆ ಒಪ್ಪಿಗೆ ನೀಡುತ್ತಿಲ್ಲ. ಅಂತಹ ಕಡೆ ಸೋಲಾರ್ ದೀಪ ಅಳವಡಿಸಿದ್ದಾರೆ. ಅದು ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ,
ರೈತರ ಪಂಪ್ ಸೆಟ್ ಗಳಿಗೆ ಕನಿಷ್ಟ 7 ಗಂಟೆ ನೀಡುತ್ತೀರಿ. ಆದರೆ ಅದು ಸಮರ್ಪಕವಾಗಿ ನೀಡುತ್ತಿಲ್ಲ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ವಿದ್ಯುತ್ ಸಮಸ್ಯೆಗಳ ಬಗ್ಗೆ ದೂರವಾಣಿ ಕರೆ ಮೂಲಕ ತಿಳಿಸಿದರೆ ಇಲಾಖೆಯವರು ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಸಭೆಗೆ ಆಗಮಿಸಿದ
ಮತ್ತೊಬ್ಬ ರೈತ ಮುಖಂಡರಾದ ಬಸವರಾಜು ಮಾತನಾಡಿ
ಬಡವರಿಗೆ ನೀಡುವ ಉಚಿತ ವಿದ್ಯುತ್ ಯೋಜನೆಗಳಾದ ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ ಯೋಜನೆಯ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ. ಕಾಂಚಹಳ್ಳಿ ಅಜ್ಜಿಪುರ ಮತ್ತು ಬಸಪ್ಪನ ದೊಡ್ಡಿ ಗ್ರಾಮಗಳಲ್ಲಿ
ಫಲಾನುಭವಿಗಳಿಂದ ಹಣ ವಸೂಲಿ ಮಾಡಿ ಮೀಟರ್ ಗಳನ್ನೂ ಅಳವಡಿಸುತ್ತಾರೆ. ರೈತರು ಹೊಸ ಟಿ.ಸಿ.ಗೆ ಅರ್ಜಿ ನೀಡಿದರೆ ತುಂಬಾ ವಿಳಂಬ ಮಾಡುತ್ತಿದ್ದಾರೆ. ಅತಿ ಶೀಘ್ರವಾಗಿ ಟಿಸಿ ಅಳವಡಿಸುವ ಕೆಲಸ ಆಗಬೇಕು ಎಂದು ತಿಳಿಸಿದರು. ರೈತರ ಪಂಪ್ಸೆಟ್ ಗಳಿಗೆ ರಾತ್ರಿ ಹೊತ್ತು ನೀಡುವ ವಿದ್ಯುತ್ ತಪ್ಪಿಸಿ ಸಾಧ್ಯವಾದಷ್ಟು ಹಗಲಿನ ವೇಳೆ ನೀಡಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಆಧಿಕಾರಿಗಳು ರೈತರಿಗೆ ವಿದ್ಯುತ್ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತೇವೆ ನಮ್ಮ ಅಧಿಕಾರಿಗಳು ಕರ್ತವ್ಯಲೋಪವೆಸಗಿದರೆ ಅದನ್ನು ನೇರವಾಗಿ ನಮ್ಮಗಮನಕ್ಕೆ ತನ್ನಿ ಕೂಡಲೆ ಬಗೆಹರಿಸಿ ಸೂಕ್ತ ಕ್ರಮದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯ ಪಾಲಕ ಅಭಿಯಂತರ ಶಾಹಿದಾ ಸಿದ್ದೀಕ್, ಸಹಾಯಕ ಕಾರ್ಯಪಾಲಕ ಅಭಿಯಂತರ ಶಂಕರ್, ಸಾರ್ವಜನಿಕರು,ರೈತರು ಸೇರಿದಂತೆ ಇತರರು ಹಾಜರಿದ್ದರು.