ಮಂಗಳೂರು: ನಗರದ ಬಿಲ್ಡರ್ ಒಬ್ಬರು ಬಹುಮಹಡಿ ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಭಾನುವಾರ ನಡೆದಿದೆ.



ಬಿಲ್ಡರ್ ಮೋಹನ್ ಅಮೀನ್ (66) ಆತ್ಮಹತ್ಯೆ ಮಾಡಿಕೊಂಡವರು. ಭಾನುವಾರ ಬೆಳಗ್ಗೆ 9 ಗಂಟೆಯ ವೇಳೆಗೆ ಘಟನೆ ನಡೆದಿದ್ದು, 17 ಮಹಡಿಯಲ್ಲಿ ವಾಸವಿದ್ದ ಅವರು ಅಪಾರ್ಟ್‌ಮೆಂಟ್ ನ ಟೆರೆಸ್ ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಮಂಗಳೂರಿನ ವಿವಿಧ ಅಪಾರ್ಟ್ಮೆಂಟ್ ನಿರ್ಮಾಣ ಮಾಡಿದ್ದ ಮೋಹನ್ ಅಮೀನ್ ಅವರ ಆತ್ಮಹತ್ಯೆ ಹಿಂದಿನ ನಿಖರ ಕಾರಣ ತಿಳಿದು ಬಂದಿಲ್ಲ. ಕದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.