Badagi: Joint and Skin Disease Free Treatment Checkup Camp
ರೋಟರಿ ಕ್ಲಬ್ ಬ್ಯಾಡಗಿ ಹಾಗೂ ಶಿವಂ ಹಿರೇಗೌಡರ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ರಾಣೆಬೆನ್ನೂರು ಇವರ ಸಹಯೋಗದಲ್ಲಿ ಗೆಲುವು ಕೀಲು ಹಾಗೂ ಚರ್ಮರೋಗ ಉಚಿತ ಚಿಕಿತ್ಸಾ ತಪಾಸಣೆ ಶಿಬಿರ ಜರುಗಿತು
ಇಂದು ರೋಟರಿ ಕ್ಲಬ್ ಬ್ಯಾಡಗಿ ಮತ್ತು ಶಿವಂ ಹಿರೇಗೌಡರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರಾಣೆಬೆನ್ನೂರು ಮತ್ತು ಸ್ನೇಹ ಸದನ ಇವರ ಸಹಯೋಗದಲ್ಲಿ ಕದರಮಂಡಲಗಿ ರಸ್ತೆಯಲ್ಲಿರುವ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರ ಬಡ ಹೆಣ್ಣು ಮಕ್ಕಳ ನಿರ್ಗತಿಕರ ವಸತಿ ಕುಟೀರದಲ್ಲಿ ಏಲುವು ಕೀಲು ಮತ್ತು ಚರ್ಮರೋಗದ ಉಚಿತ ಚಿಕಿತ್ಸೆ ತಪಾಸಣಾ ಶಿಬಿರ ನಡೆಯಿತು. ಈ ಶಿಬಿರದಲ್ಲಿ ಬ್ಯಾಡಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಸುಮಾರು 240 ಜನ ತಪಾಸಣೆ ಮಾಡಿಸಿಕೊಂಡರು. ಏಲುವು ಕೀಲು ತೊಂದರೆ ಇರುವ ರೋಗಿಗಳಿಗೆ ಕೆಲವು ಔಷಧಿಗಳನ್ನು ಉಚಿತವಾಗಿ ನೀಡಲಾಯಿತು ಮತ್ತು ವಸತಿ ಶಾಲೆಯಲ್ಲಿರುವ 45 ವಿದ್ಯಾರ್ಥಿಗಳು ಸಹ ಚಿಕಿತ್ಸೆ ತಪಾಸಣೆ ಮಾಡಿಸಿಕೊಂಡು ಉಚಿತವಾಗಿ ಔಷಧಗಳನ್ನು ಪಡೆದರು.
ಶಿಬಿರದ ಉದ್ಘಾಟನೆ ಮಾಡಿದ ರಾಣೆಬೆನ್ನೂರಿನ ಎಲುಬು ಕೀಲು ತಜ್ಞ ವೈದ್ಯರಾದ ಡಾ. ವಿನಾಯಕ ಹಿರೇಗೌಡರ ಮಾತನಾಡಿ ಈ ಶಿಬಿರದ ಮುಖ್ಯ ಉದ್ದೇಶ ಏನೆಂದರೆ, ಕೆಲವು ದೀರ್ಘಾವಧಿ ರೋಗಗಳು ಬರುವ ಲಕ್ಷಣಗಳನ್ನು ಕಂಡುಹಿಡಿದು ಅವುಗಳಿಗೆ ಪ್ರಾರಂಭದಲ್ಲಿಯೆ ಸೂಕ್ತ ಚಿಕಿತ್ಸೆ ಸಲಹೆ ನೀಡುವುದು ಹಾಗೂ ಹುಬ್ಬಳ್ಳಿ ದಾವಣಗೆರೆ ಬೆಂಗಳೂರು ಮಣಿಪಾಲ ಇಂತಹ ದೊಡ್ಡ ಊರುಗಳಲ್ಲಿ ದೊಡ್ಡ ಆಸ್ಪತ್ರೆಗಳಲ್ಲಿ ಸಿಗುವಂತಹ ಚಿಕಿತ್ಸೆ ಸೌಲಭ್ಯಗಳು ನಮ್ಮ ನಿಮ್ಮ ಅಕ್ಕಪಕ್ಕದ ಹತ್ತಿರದ ಊರುಗಳಲ್ಲಿಯೂ ಸಹ ದೊರೆಯುತ್ತವೆ ಎಂದು ಜಾಗೃತಿ ಮೂಡಿಸುವುದು, ಗ್ರಾಮಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಸಾರ್ವಜನಿಕರಿಗೆ ಇಂತಹ ಉತ್ತಮವಾದ ಉಚಿತ ತಪಾಸಣೆ ಸಲಹೆ ದೊರಕಿಸುವುದು ಎಂದರು.
ಬ್ಯಾಡಗಿ ರೋಟರಿ ಕ್ಲಬ್ಬಿನ ಅಧ್ಯಕ್ಷ ಶ್ರೀ ಮಂಜುನಾಥ ಪುಟ್ಟಪ್ಪ ಉಪ್ಪಾರ ಮಾತನಾಡಿ ಈ ಶಿಬಿರದಲ್ಲಿ ಬ್ಲಡ್ ಪ್ರೆಷರ್ ಪರೀಕ್ಷೆ, ಕ್ಯಾಲ್ಸಿಯಂ ಸಾಂದ್ರತೆ ಪ್ರಮಾಣದ ಪರೀಕ್ಷೆ, ಬೋನ್ ಡೆನ್ಸಿಟಿ ಪ್ರಮಾಣದ ಪರೀಕ್ಷೆ, ಏಲುಬು ಕೀಲು ಜಾಯಿಂಟ್ ಪೇನ ತೊಂದರೆಗಳಿಗೆ ಚಿಕಿತ್ಸೆ ಸಲಹೆ, ಕೆಲವು ಸಾಮಾನ್ಯ ಔಷಧಗಳ ಉಚಿತ ವಿತರಣೆ, ಫಿಜಿಯೋಥೆರಪಿ ವಿಧಾನಗಳ ಉಚಿತ ಸಲಹೆ, ಚರ್ಮರೋಗಕ್ಕೆ ಚಿಕಿತ್ಸಾ ಔಷಧಗಳ ಸಲಹೆಗಳು ಉಚಿತವಾಗಿ ದೊರೆಯಲಿವೆ. ಈ ತಪಾಸಣೆ ಮಾಡಿಸಿಕೊಳ್ಳಲು ನೀವು ಇಂತಹ ಆಸ್ಪತ್ರೆಗಳಲ್ಲಿ ಹೋದರೆ ಸಾವಿರಾರು ರೂಪಾಯಿಗಳನ್ನು ಕೊಡಬೇಕಾಗುತ್ತದೆ, ನಿಮ್ಮೆಲ್ಲರ ಹಣ ಮತ್ತು ನಿಮ್ಮ ಸಮಯ ಉಳಿತಾಯವಾಗಲಿದೆ, ಸಾರ್ವಜನಿಕರು ಆರ್ಥಿಕವಾಗಿ ಹಿಂದುಳಿದವರು ಇಂತಹ ಶಿಬಿರಗಳಲ್ಲಿ ಬಂದು ತಪಾಸಣೆ ಉಚಿತವಾಗಿ ಮಾಡಿಸಿಕೊಂಡು ಶಿಬಿರದ ಲಾಭ ಪಡೆದುಕೊಳ್ಳಲು ಕೇಳಿಕೊಂಡರು. ಇದರಿಂದ ಬಡವರು ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ಹೋಗಲಾಗದೆ ಚಿಕಿತ್ಸೆ ವಂಚಿತರಾಗುವುದು ತಪ್ಪುತ್ತದೆ. ಮುಂಬರುವ ದೊಡ್ಡ ರೋಗಗಳಿಗೆ ಪ್ರಾರಂಭದಲ್ಲಿಯೇ ಅದರ ಲಕ್ಷಣಗಳು ಗೊತ್ತಾಗಲಿವೆ. ಅಂತಹ ರೋಗದ ಲಕ್ಷಣಗಳು ಕಂಡುಬಂದಲ್ಲಿ ತಮಗೆ ಮುಂದಿನ ಚಿಕಿತ್ಸೆಗೆ ದಾರಿ ಮಾಡಿಕೊಡಲಿವೆ, ಹಾಗೂ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಂತಹ ಶಿಬಿರಗಳು ಪ್ರಯೋಜನಕಾರಿಯಾಗಲಿವೆ. ನಮ್ಮ ರೋಟರಿ ಕ್ಲಬ್ ವತಿಯಿಂದ ಇಂತಹ ಶಿಬಿರಗಳು ಆಗಾಗ ನಡೆಯುತ್ತಿರುತ್ತವೆ. ಶಿಬಿರಗಳ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ದಿನಪತ್ರಿಕೆಗಳ ಮೂಲಕ ಮಾಹಿತಿ ದೊರೆಯುತ್ತವೆ. ಅವುಗಳನ್ನು ಸಾರ್ವಜನಿಕರು ಗಮನಿಸಿ ಪ್ರಯೋಜನ ಪಡೆಯಬೇಕು ಎಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ರಾಣೆಬೆನ್ನೂರಿನ ಚರ್ಮರೋಗ ತಜ್ಞ ವೈದ್ಯರಾದ ಡಾಕ್ಟರ್ ಶ್ವೇತಾ ಹಿರೇಗೌಡರ, ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಮತ್ತು ಸ್ನೇಹ ಸದನದ ಮುಖ್ಯ ನಿರ್ದೇಶಕಿ ಸಿಸ್ಟರ್ ಗ್ಲೋರಿಯಾ, ಸಿಸ್ಟರ್ ರೂಪ, ಶಿಕ್ಷಕಿಯರು ಕ್ಲಬ್ಬಿನ ಸದಸ್ಯರಾದ ಪವಾಡಪ್ಪ ಆಚನೂರ, ಮಹಾಂತೇಶ ಬಂದಮ್ಮನವರ, ಸುಭಾಶ ಕುರುಕುಂದಿ, ಸತೀಶ ಅಗಡಿ, ಸುರೇಶ ಗೌಡರ, ವಿಶ್ವನಾಥ ಅಂಕಲಕೋಟಿ, ಮಾಲತೇಶ ಉಪ್ಪಾರ, ಅನಿಲಕುಮಾರ ಬೊಡ್ಡಪಾಟಿ, ದೇವರಾಜ ಹುಡೆದ, ಎಸ್ ಎನ್ ನಿಡಗುಂದಿ, ಲಿಂಗಯ್ಯ ಹಿರೇಮಠ, ಮಹಿಳಾ ಸದಸ್ಯರಾದ ಲಕ್ಷ್ಮಿ ಉಪ್ಪಾರ ಜಯಾ ಪಟ್ಟಣಶೆಟ್ಟಿ, ಪ್ರತಿಭಾ ಮೇಲಗಿರಿ ಇನ್ನಿತರರು ಉಪಸ್ಥಿತರಿದ್ದರು