A major organization for environment and health awareness - Melappa Ammaljeri
ರಬಕವಿ-ಬನಹಟ್ಟಿ:
ಬನಹಟ್ಟಿ ನಗರದ ಅಶೋಕ ಕಾಲನಿಯಲ್ಲಿ ಕೆಎಚ್.ಪಿಟಿ ಹಾಗೂ ಗೆಳೆಯರ ಬಳಗದ ಸಂಯುಕ್ತಾಶ್ರಯದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಮತ್ತು ಆರೋಗ್ಯ ಜಾಗೃತಿಯ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳ ಗೌರವ ಸನ್ಮಾನ ಕಾರ್ಯಕ್ರಮ ಜರುಗಿತು.
ವಿಶೇಷವಾಗಿ ಮಕ್ಕಳಿಗೆ ಸಸಿ ಮತ್ತು ಪುಸ್ತಕ ಕೊಡಮಾಡುವುದರ ಮೂಲಕ ಜ್ಞಾನ ಮತ್ತು ಪರಿಸರ ಅರಿವನ್ನು ಮೂಡಿಸುವ ಕಾರ್ಯ ನಡೆಯಿತು.
ಕಾರ್ಯಕ್ರಮ ದಲ್ಲಿ ಮೆಲಪ್ಪ ಅಮ್ಮಲಜೇರಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಸನ್ಮಾನಿಸಿ, ಪರಿಸರದ ಅರಿವನ್ನು ಮೂಡಿಸುವ ಸಂಸ್ಥೆಯ ಕಾರ್ಯವು ಅಭೂತಪೂರ್ವ ವಾಗಿದೆ. ನಿಸರ್ಗವು ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ನಿಸರ್ಗಕ್ಕೆ ಏನು ಕೊಟ್ಟಿದ್ದೆವೆ ಎಂಬುದು ಮುಖ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಶ್ರೀಶೈಲ ಬೀಳಗಿ, ಶಿವಾನಂದ ಕಾಗಿ, ಶಂಕರ ಟಿರಕಿ, ದುರ್ಗವ್ವ ಹರಿಜನ, ಸದಾಶಿವ ಪರೀಟ, ಹಿರಿಯರಾದ ಕಲ್ಲಪ್ಪ ಗೋಕಾಂವಿ, ಸತ್ಯವಾನ್ ಬಕರೆ, ಸರ್ಕಾರಿ ಆಸ್ಪತ್ರೆಯ ಡಾ.ತುಂಗಳ, ಎಎಸೈ ಎಸ್.ಎಂ.ಹುದ್ದಾರ, ಶಿಕ್ಷಕ ಬಜಂತ್ರಿ ಸೇರಿದಂತೆ ತಾಯಂದಿರು ಹಾಗೂ ಅನೇಕರು ಇದ್ದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದುಕೊಂಡ ನಗರದ ವಿವಿಧ ಶಾಲೆಗಳ ಸುಮಾರು 32 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನುಕೆಎಚ್.ಪಿಟಿ ಬಿಟಿ ಯೋಜನೆಯ ಸಮುದಾಯ ಸಂಯೋಜಕರಾದಸುಮಿತ್ತಾ ಬೊರಗಿ ನಿರೂಪಿಸಿ, ವಂದಿಸಿದರು.