Shivanna demands to avoid stray dogs
ಗಂಗಾವತಿ: ನಗರದೆಲ್ಲಡೆ ಸಾರ್ವಜನಿಕರಿಗೆ ತೀವ್ರ ತೊಂದರೆ ನೀಡುತ್ತಿರುವ
ಬೀದಿ ನಾಯಿಗಳನ್ನು ನಗರಸಭೆ ಕೂಡಲೆ ಸ್ಥಳಾಂತರಿಸಿ ಸಾರ್ವಜನಿಕರಿಗೆ
ಆಗುತ್ತಿರುವ ತೊಂದರೆ ತಪ್ಪಿಸಬೇಕೆಂದು ಉದ್ಯಮಿ ಶಿವಣ್ಣ ಮಾರೆಣ್ಣ ಉಪ್ಪಾರ
ಇವರು ಪೌರಾಯುಕ್ತರನ್ನು ಅಗ್ರಹಿಸಿದ್ದಾರೆ.
ಹಿಂದೆ ಹಂದಿಗಳ ಹಾವಳಿಯಿಂದ ಜನ ತತ್ತರಿಸಿ ಹೋಗಿದ್ದರು. ಆದರೆ ಬೀದಿ ನಾಯಿಗಳ ಹಾವಳಿ ಇತ್ತೀಚಿಗೆ ಹೆಚ್ಚಾಗಿ
ಸಾರ್ವಜನಿಕರು ರಾತ್ರಿ ವೇಳೆಯಲ್ಲಿ ತಿರುಗಾಡುವಂತಿಲ್ಲ ಇಂಥ ಪರಿಸ್ಥಿತಿ
ನಿರ್ಮಾಣವಾಗಿದೆ. ಕೆಲವೊಂದು ಏರಿಯಾದಲ್ಲಿ ಹಗಲಲ್ಲೆ ಜನ ಜಾನುವಾರುಗಳ
ಮೇಲೆ ದಾಳಿ ನಡೆಸಿ ಸಂಕಷ್ಟಕ್ಕೀಡಾಗುವಂತೆ ಮಾಡುತ್ತಿವೆ ಬೈಪಾಸ್ ರಸ್ತೆಯ
ದುರುಗಮ್ಮ ನಾಲೆಯ ಬ್ರಿಡ್ಜ್ ಬಳಿ ಸುಮಾರು 40ಕ್ಕೆ ಹೆಚ್ಚು ಬೀದಿನಾಯಿಗಳು
ಇದ್ದು ದಾರಿ ಹೋಕರಿಗೆ ತೀವ್ರ ತೊಂದರೆ ಮಾಡುತ್ತಿವೆ ಕೆಲ ಜನರಿಗೆ
ಕಚ್ಚಿಗಾಯಗೊಳಿಸಿದರೆ ಇನ್ನೂ ಕೆಲವು ಮೋಟರ್ ಬೈಕ್ ಬೆನ್ನತ್ತಿ ಇಲ್ಲದ
ಅವಘಡ ಸೃಷ್ಟಿಸುತ್ತಿವೆ. ಜಾನುವಾರುಗಳು ಸಂಚಾರಮಾಡದ ಸ್ಥಿತಿ ಇಲ್ಲಿ
ನಿರ್ಮಾಣವಾಗಿದೆ ಕೂಡಲೆ ಮೊದಲು ಇಲ್ಲಿ ಮಾಂಸದ ಅಂಗಡಿ ಇಡಲಾಗಿತ್ತು ರುಚಿ
ಕಂಡಿರುವ ನಾಯಿಗಳು ಚಿಕ್ಕ ಮಕ್ಕಳು ಮನುಷ್ಯರು, ಬೆಕ್ಕು ಇತರೆ ಕೋಳಿ,
ಮೇಕೆಗಳನ್ನು ಕಚ್ಚಿ ಗಾಯಗೊಳಿಸಿ ನಷ್ಟ ಮಾಡುತ್ತಿದ್ದು ಕೂಡಲೆ
ಪೌರಾಯುಕ್ತರ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಶಿವಣ್ಣ
ಒತ್ತಾಯಿಸಿದ್ದಾರೆ.