Make Gramina Yuva Morcha Mandal President: Mallikarjuna Nyamagowda
ವರದಿ ಸಚೀನ ಜಾಧವ
ಜಮಖಂಡಿ: ಕಳೆದ 10 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಮಲ್ಲಿಕಾರ್ಜುನ. ಈ. ನ್ಯಾಮಗೌಡ ಅವರು ಅನೇಕ ಕೆಲಸ ಕಾರ್ಯಗಳನ್ನು ಮಾಡುವುದಲ್ಲದೆ ತಮಗೆ ನೀಡಿದ ವಾರ್ಡ ಜವಾಬ್ದಾರಿಯಲ್ಲಿ ನಿಷ್ಠಾವಂತಿಕೆಯಿಂದ ನಿಭಾಯಿಸಿ ಪಕ್ಷದ ಸಂಘಟನೆಯಲ್ಲಿ ಯಶಸ್ವಿ ಖಂಡೀರುತ್ತಾರೆ. ಆದರಿಂದ ಇವರನ್ನು ಬಿಜೆಪಿ ಗ್ರಾಮೀಣ ಯುವ ಮೋರ್ಚಾ ಗ್ರಾಮೀಣ ಮಂಡಲ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಎಂದು ಗ್ರಾ.ಪಂ ಸದಸ್ಯರಾದ ಗಾಮೇಶ ಬಾಪಕರ ಹಾಗೂ ಯುವ ಮುಖಂಡರಾದ ಮಲ್ಲುಗೌಡ ನ್ಯಾಮಗೌಡ ಅವರು ನಿನ್ನೇ ನಡೆದ ಜಂಟಿ ಸುದ್ದಿಗೋಷ್ಠಿ ಮೂಲಕ ಪಕ್ಷದ ಮುಖಂಡರನ್ನು ಒತ್ತಾಯಿಸಿದ್ದಾರೆ.
ಈ ಹಿಂದೆ ಕರ್ನಾಟಕ ಜನಬೆಂಬಲ ವೇದಿಕೆ ಸಂಘಟನೆಯಲ್ಲಿ ಐದು ವರ್ಷಗಳ ಕಾಲ ಜಿಲ್ಲಾಧ್ಯಕ್ಷರಾಗಿ ಸಣ್ಣ ವಯಸ್ಸಿನಲ್ಲಿಯೇ ಯಶಸ್ವಿಯಾಗಿ ಸಂಘಟನೆ ಮಾಡಿದ ಅನುಭವವನ್ನು ಹೊಂದಿರುತ್ತಾರೆ. ಇದರೊಂದಿಗೆ ಅನೇಕ ಯುವಕರನ್ನು ಪಕ್ಷಕ್ಕೆ ಸೇರ್ಪಡೆಯಾಗಲು ಪ್ರೋತ್ಸಾಹಿಸಿ ಪಕ್ಷವನ್ನು ಬಲಪಡಿಸಿದ್ದಾರೆ ಮತ್ತು ಅನೇಕ ಸಾಮಾಜಿಕ ಕಾರ್ಯಗಳಿಗೆ ಧಾನ ಧರ್ಮ, ಬಡ ವಿದ್ಯಾರ್ಥಿಗಳಿಗೆ ಸಹಾಯ ಸಹಕಾರ, ಸಾವಳಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕನ್ನಡ ಸಂಘಟನೆಯ ಮೂಲಕ ತಮ್ಮದೇ ಚಾಪು ಮೂಡಿಸುವದಲ್ಲದೆ ಧಾರ್ಮಿಕ ಹಾಗೂ ಇನ್ನಿತರೇ ಕಾರ್ಯಗಳಿಗೆ ಧನ ಸಾಹಯ ನೀಡುವ ಮೂಲಕ ಸಣ್ಣ ವಯಸ್ಸಿನಲ್ಲಿಯೇ ಹೆಸರುವಾಸಿಯಾಗಿದ್ದಾರೆ ಎಂದರು.
ಇನ್ನೂ ಕಳೆದ ಚುನಾವಣೆಯಲ್ಲಿ ಕೂಡಾ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಿದ ವಿವಿಧ ಸಾಧನೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಸತತವಾಗಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ವಾರ್ಡನಲ್ಲಿ ಮುನ್ನಡೆಯಾಗಲು ಕಾರಣೀ ಭೂತರಾದವರಲ್ಲಿ ಒಬ್ಬರಾಗಿದ್ದಾರೆ ಆದರಿಂದ ಇದರಿಂದ ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯ ಹಿತದೃಷ್ಟಿಯಿಂದ ಇವರನ್ನು ಇನ್ನಷ್ಟು ಪ್ರಭಲವಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರವಾಗುವಂತೆ ಇವರನ್ನು ಬಿಜೆಪಿ ಗ್ರಾಮೀಣ ಯುವ ಮೋರ್ಚಾ ಸಂಘಟನೆಯ ಸಾವಳಗಿ ಮಂಡಲ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಪಕ್ಷದ ಹಿರಿಯರಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ವೀನೋಭಾ ನ್ಯಾಮಗೌಡ, ರಾಜುಗೌಡ ಪಾಟೀಲ, ಬಸವರಾಜ ಪರಮಗೌಡ, ತುಕಾರಾಮ ಬಾಪಕರ, ಸುಜೀತಗೌಡ ಪಾಟೀಲ, ಲಕ್ಷ್ಮಣ ಕುಂಬಾರ, ಮಹಾಂತೇಶ ಐಹೋಳ್ಳಿ, ಧೂಮಖೇತು ನಾಂದ್ರೇಕರ, ಮದನಸಿಂಗ ರಜಪೂತ, ಪ್ರಕಾಶ ತೊರವಿ, ಆಕಾಶ ಮಾಳಿ, ಮಹಾಂತೇಶ ಐಹೋಳ್ಳಿ, ರವಿ ಗಂಗಾಧರ, ಭೀಮು ನ್ಯಾಮಗೌಡ ಅನೇಕರು ಉಪಸ್ಥಿತರಿದ್ದರು.