Karnataka Editors and Correspondents Association Tipatur Unit Environment
ತಿಪಟೂರು: ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ (ರಿ,) ತಿಪಟೂರು ಘಟಕ ಮತ್ತು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ,) ತಿಪಟೂರು ಘಟಕ ಸಂಯುಕ್ತ ಆಶ್ರಯದಲ್ಲಿ ಮಾವಿನ ಸಸಿ ಹಾಗೂ ಹಲಸಿನ ಸಸಿಗಳನ್ನು ನೆಟ್ಟು ಸಸಿಗಳಿಗೆ ನೀರು ಎರೆಯುವ ಮೂಲಕ ಜೂನ್ 5 ಇಂದು ವಿಶ್ವ ಪರಿಸರ ದಿನದ ದಿನಾಚರಣೆ ಆಚರಣೆ ಮಾಡಲಾಯಿತು.
ಕೆರಸಂಘದ ಖಜಾಂಚಿ ಶ್ರೀಮತಿ ಶುಭ ವಿಶ್ವಕರ್ಮ ಕಾರ್ಯಕ್ರಮದ ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಮಿಕ ಸಂಘದ ಅಧ್ಯಕ್ಷ ಸರ್ವೇಶ್ ಮಾತನಾಡಿ ಮನುಷ್ಯ ಉಸಿರಾಡಲು ಮುಖ್ಯ ಕಾರಣ ಪರಿಸರದಲ್ಲಿರುವ ಗಿಡಮರಗಳು. ಪರಿಸರವೇ ಈ ಭೂಮಿಯ ಮೇಲೆ ದೊಡ್ಡ ದೇವರು. ಪ್ರತಿಯೊಂದು ಜೀವರಾಶಿಗಳು ಉಸಿರಾಡಲು ಮುಖ್ಯ ಕಾರಣ ಪರಿಸರ ಹಾಗಾಗಿ ಸಸಿಗಳನ್ನು ಹೆಚ್ಚು ಹೆಚ್ಚು ನೆಟ್ಟು ಪರಿಸರ ಉಳಿಸಿ ಬೆಳೆಸಬೇಕು ಎಂದರು.
ರೈಲ್ವೆ ಕಾರ್ಮಿಕ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎ ವಿ ಕಾಂತರಾಜು ಮಾತನಾಡಿ ಎರಡು ಸಂಘಗಳ ಸಂಯುಕ್ತ ಆಶ್ರಯಯದಲ್ಲಿ ಪರಿಸರ ದಿನಾಚರಣೆ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಮತ್ತು ಈ ಸಂಘಗಳು ನಿರಂತರ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದು ಈ ಸೇವೆ ಹೀಗೆ ಮುಂದುವರೆಯಲಿ ಎಂದ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸಂಪಾದಕರು ಮತ್ತು ವರದಿಗಾರ ಸಂಘ ತಿಪಟೂರು ಘಟಕ ಗೌರವಾಧ್ಯಕ್ಷರು ಡಾ. ಭಾಸ್ಕರ್, ಅಧ್ಯಕ್ಷರು ಗಣೇಶ ಎಸ್, ಪ್ರಧಾನ ಕಾರ್ಯದರ್ಶಿ ಧರಣೇಶ್ ಕುಪ್ಪಾಳು, ಖಜಾಂಚಿ ಶ್ರೀಮತಿ ಶುಭ ವಿಶ್ವಕರ್ಮ ಹಾಗೂ ಕಾರ್ಮಿಕ ಸಂಘ ನೊಣವಿನಕೆರೆ ಹೋಬಳಿ ಅಧ್ಯಕ್ಷರು ಗಂಗಾಧರ ಮತ್ತಿತರರು ಉಪಸ್ಥಿತರಿದ್ದರು.