Kanakagiri: Application invited under various schemes
ಕೊಪ್ಪಳ ಜೂನ್ 02 (ಕರ್ನಾಟಕ ವಾರ್ತೆ): ಕನಕಗಿರಿ ಪಟ್ಟಣ ಪಂಚಾಯತಿಯಿಂದ 2022-23ನೇ ಸಾಲಿಗೆ ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನಿಸಲಾಗಿದೆ.
ಎಸ್.ಎಫ್.ಸಿ. ಶೇ 24.10, 5.00 & 7.25 ರ ಯೋಜನೆಯಡಿಯಲ್ಲಿ ಪಟ್ಟಣ ಪಂಚಾಯತ ವ್ಯಾಪ್ತಿಯ ಶ್ರವಣ ದೋಷ ವಿಕಲಚೇತನರಿಗೆ ಹಿಯರಿಂಗ್ ಮಷೀನ್ ನೀಡುವುದು, ವಿಕಲಚೇತನ ಮಹಿಳೆಯರಿಗೆ ಸ್ವಾವಲಂಬನೆ ಹೊಂದಲು ಬಟ್ಟೆ ಹೊಲಿಗೆ ಯಂತ್ರ ನೀಡುವುದು ಹಾಗೂ ಕನಕಗಿರಿ ಪಟ್ಟಣದ ಇತರೆ ಹಿಂದುಳಿದ ವರ್ಗದವರಿಗೆ, ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡ ವರ್ಗದ ಜನರಿಗೆ ವೈಯಕ್ತಿಕ ಸೋಲಾರ್ ವಿದ್ಯುತ್ ದೀಪಗಳನ್ನು ಕೊಡಿಸುವ ಯೋಜನೆಗಳಿದ್ದು ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.
ಕನಕಗಿರಿ ಪಟ್ಟಣದ ಅರ್ಹ ಸಾರ್ವಜನಿಕರು ತಮ್ಮ ಆಧಾರ್ ಪ್ರತಿ, ಜಾತಿ & ಆದಾಯ, ವಾಸಸ್ಥಳ ಪ್ರಮಾಣ ಪತ್ರ, ಭಾವ ಚಿತ್ರ, ವಿಕಲಚೇತನ ಅರ್ಜಿದಾರರಾಗಿದ್ದರೆ ಅಂಗವಿಕಲರ ಪ್ರಮಾಣ ಪತ್ರ, ಈ ಎಲ್ಲಾ ಸೂಕ್ತ ದಾಖಲಾತಿಗಳೊಂದಿಗೆ ಪಟ್ಟಣ ಪಂಚಾಯತ ಕಚೇರಿಗೆ ಜೂನ್ 14ರ ಸಂಜೆ 4.30ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಕನಕಗಿರಿ ಪ.ಪಂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.