Koppala University emblem unveiled by the Governor
ಕೊಪ್ಪಳ ಜೂನ್ 02 (ಕರ್ನಾಟಕ ವಾರ್ತೆ): ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಶುಕ್ರವಾರ ರಾಜಭವನದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಲಾಂಛನವನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ, ಕೊಡಗು ವಿವಿ ಕುಲಪತಿ ಡಾ.ಅಶೋಕ್ ಆಲೂರ್, ಬಾಗಲಕೋಟೆ ವಿವಿ ಕುಲಪತಿ ಡಾ.ದೇಶಪಾಂಡೆ, ಚಾಮರಾಜನಗರ ವಿವಿ ಕುಲಪತಿ ಡಾ.ಗಂಗಾಧರ್, ಬೀದರ್ ವಿವಿ ಕುಲಪತಿ ಡಾ.ಬಿರಾದಾರ್, ಹಾಸನ ವಿವಿ ಕುಲಪತಿ ಡಾ. ತಾರಾನಾಥ್, ಹಾವೇರಿ ವಿವಿ ಕುಲಪತಿ ಡಾ.ಸುರೇಶ ಎಚ್.ಜಂಗಮಶೆಟ್ಟಿ ಉಪಸ್ಥಿತರಿದ್ದರು.