ಆರ್ ಜೆ ಪ್ರೊಡಕ್ಷನ್ ನಿರ್ಮಾಣದ ನೂತನ ತುಳು ಚಲನಚಿತ್ರದ ಟೈಟಲ್ ಮತ್ತು ಮೋಶನ್ ಪೋಸ್ಟರ್ ಬಿಡುಗಡೆ

Prakhara News
1 Min Read

ಕಳೆದ ಕೆಲ ದಿವಸಗಳಿಂದ ಜನಮಾನಸದಲ್ಲಿ ಕುತೂಹಲ ಕೆರಳಿಸಿದ್ದ, ಬಹು ನಿರೀಕ್ಷಿತ ಆರ್ ಜೆ ಪ್ರೊಡಕ್ಷನ್ ನಿರ್ಮಾಣದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ತುಳು ಚಲನಚಿತ್ರದ ಟೈಟಲ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಇಂದು ನಡೆಯಿತು.

ಕೊನೆಗೂ ಚಿತ್ರದ ಹೆಸರನ್ನು ತುಳು ರಂಗಭೂಮಿ ಮತ್ತು ಚಲನಚಿತ್ರ ನಟ ಹಾಗೂ ನಿರ್ದೇಶಕರಾಗಿರುವ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಇವರು ಅಧಿಕೃತವಾಗಿ ಅನಾವರಣಗೊಳಿಸಿದರು.

ಇಷ್ಟು ದಿವಸ ಕಲಾಭಿಮಾನಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರ ಖುಷಿ ಟೈಲರ್ಸ್ ಎಂಬ ಚಿತ್ರದ ಹೆಸರು. ನಂತರ ಮಾತನಾಡಿದ ದೇವದಾಸ್ ಕಾಪಿಕಾಡ್‌ರವರು ತುಳು ಚಿತ್ರರಂಗದಲ್ಲಿ ಇಂತಹದೇ ವಿಭಿನ್ನ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ಚಿತ್ರತಂಡವನ್ನು ಪ್ರೋತ್ಸಾಹಿಸಿದರು.

ಮೋಶನ್ ಪೋಸ್ಟರ್ ವೀಕ್ಷಿಸಿದ ಬಳಿಕ ಈ ಚಿತ್ರದ ಬಗ್ಗೆ ಇದ್ದ ಕುತೂಹಲ ಇನ್ನಷ್ಟು ಹೆಚ್ಚಾಯಿತು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕರಾದ ರೋಷನ್ ಆರ್ ಆಳ್ವ, ಛಾಯಾಗ್ರಾಹಕರಾದ ಅರುಣ್ ರೈ ಪುತ್ತೂರು, ಚರಣ್ ಆಚಾರ್ಯ ಪುತ್ತೂರು, ಚಿತ್ರತಂಡದಿಂದ ರಾಘವೇಂದ್ರ ಹೊಳ್ಳ, ನವೀನ್ ನೇರೋಲ್ತಡಿ ಮತ್ತು ಹರ್ಷರಾಜ್ ಬಂಟ್ವಾಳ ಉಪಸ್ಥಿತರಿದ್ದರು.

Share This Article
Leave a Comment