ಮಂಗಳೂರು : ಮಾದಕ ವಸ್ತು ಸೇವಿಸಿ ಅಸಭ್ಯ ವರ್ತನೆ – ಮಹಿಳೆ ಸೇರಿ ಇಬ್ಬರ ಬಂಧನ

Prakhara News
0 Min Read

ಮಂಗಳೂರು: ಮಾದಕ ವಸ್ತು ಸೇವಿಸಿ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕ ಹಾಗೂ ಮಹಿಳೆಯನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ಕಂಕನಾಡಿಯ ವೆಲೆನ್ಸಿಯಾ ಸೂಟರ್ಪೇಟೆಯ 6ನೇ ಕ್ರಾಸ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ ನಿವಾಸಿಗಳಾದ ಹರ್ಷಿತ್‌ ಶೆಟ್ಟಿ (31) ಹಾಗೂ ಸನ್ನಿಧಿ (28)ಬಂಧಿತರು. ಮಾತನಾಡುವಾಗ ತೊದಲುತ್ತಿದ್ದ ಅವರನ್ನು ವಿಚಾರಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಬಳಿಕ ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಅವರ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment