ಸುರತ್ಕಲ್: ಕಾಲೇಜಿಗೆ ತೆರಳಿದ ಯುವತಿ ನಾಪತ್ತೆ..!! ಪ್ರಕರಣ ದಾಖಲು

Prakhara News
1 Min Read

ಸುರತ್ಕಲ್: ಕಾಲೇಜಿಗೆ ತೆರಳಿದ ಯುವತಿಯೊಬ್ಬಳು ಬಳಿಕ ನಾಪತ್ತೆಯಾಗಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಟಿಪಳ್ಳ ಗ್ರಾಮದ ಗಣೇಶಕಟ್ಟೆ ನಿವಾಸಿ ಪ್ರಜ್ಞಾ(18) ನಾಪತ್ತೆಯಾದ ಯುವತಿ.  ಪ್ರಜ್ಞಾ ಅವರು ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮವರ್ಷದ ಬಿ.ಸಿ.ಎ. ವ್ಯಾಸಂಗ ಮಾಡುತ್ತಿದ್ದು, ಸೆ. 1 ರಂದು ಕಾಲೇಜು ಸಮವಸ್ತ್ರ ಧರಿಸಿ ಕಾಲೇಜಿಗೆ ಹೋಗುವುದಾಗಿ ತಾಯಿಯಲ್ಲಿ ತಿಳಿಸಿ ಹೋದವರು ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

ಕಾಣೆಯಾದವರ ಚಹರೆ:- ಎತ್ತರ ಸುಮಾರು 5.3 ಅಡಿ, ಸಾಧಾರಣ ಮೈಕಟ್ಟು, ಕೋಲು ಮುಖ, ಗೋಧಿ ಮೈಬಣ್ಣ, ಕನ್ನಡ, ತುಳು, ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಕಾಣೆಯಾದ ದಿನ ನೀಲಿ ಬಣ್ಣದ ಅರ್ಧ ತೋಳಿನ ಕಾಲೇಜು ಸಮವಸ್ತç ಶರ್ಟ್ ಹಾಗೂ ಕಪ್ಪು ಬಣ್ಣದ ಕಾಲೇಜು ಸಮವಸ್ತç ಪ್ಯಾಂಟ್ ಧರಿಸಿದ್ದರು. ಕಾಣೆಯಾದವರ ಗುರುತು ಪತ್ತೆಯಾದಲ್ಲಿ ಸುರತ್ಕಲ್ ಪೊಲೀಸ್ ಠಾಣೆ ಸಂಪರ್ಕಿಸುವ0ತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment