ಮದುವೆ ಮನೆಯಲ್ಲಿ ಮದುಮಗಳ ಹೊಟ್ಟೆಗೆ ಗುಂಡು ಹೊಡೆದ ಮಾಜಿ ಪ್ರಿಯಕರ….!!

Prakhara News
1 Min Read

ಬಿಹಾರ : ಮದುವೆ ಮನೆಯಲ್ಲಿ ಮದುಮಗಳ ಹೊಟ್ಟೆಗೆ ವ್ಯಕ್ತಿಯೊಬ್ಬ ಗುಂಡು ಹಾರಿಸಿರುವ ಘಟನೆ ಬಿಹಾರದ ಬಕ್ಸಾರ್ ನಲ್ಲಿ ನಡೆದಿದೆ.

ಆರತಿ ಕುಮಾರಿ ಗುಂಡಿನ ದಾಳಿಗೆ ಒಳಗಾದ ಮದುಮಗಳಾಗಿದ್ದು , ದೀನ ಬಂಧು ಗುಂಡು ಹೊಡೆದು ಬಳಿಕ ತಲೆಮರೆಸಿಕೊಂಡಿರುವ ಆರೋಪಿಯಾಗಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಆರತಿಯನ್ನು ತಕ್ಷಣವೇ ಹತ್ತಿರದ ಸದರ್ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಾರಾಣಸಿಗೆ ಕರೆದುಕೊಂಡ ಹೋಗಲಾಗಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಗುಂಡಿನ ದಾಳಿಯ ವೇಳೆ ಆರತಿ ಕುಮಾರಿ ವರನ ಜೊತೆಗೆ ವೇದಿಕೆಯಲ್ಲಿದ್ದರು. ವಧು-ವರರ ಪಕ್ಕದಲ್ಲಿ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಇದ್ದರು. ಆರತಿಯ ಸಂಬಂಧಿಕರೊಬ್ಬರು ವೇದಿಕೆಯಲ್ಲಿ ವರನ ಹಣೆಗೆ ಸಿಂಧೂರ ಹಚ್ಚುವ ಆಚರಣೆಯನ್ನು ಮಾಡುತ್ತಿದ್ದರು. ವೇದಿಕೆಯ ಮುಂದೆ ನಿಂತಿದ್ದ ಅತಿಥಿಗಳಲ್ಲಿ ಒಬ್ಬ ವ್ಯಕ್ತಿ ವಧುವಿನ ಮೇಲೆ ಗುಂಡು ಹಾರಿಸಿದ್ದಾನೆ.

ಜನರು ಭಯಭೀತರಾಗಿ, ಕಿರುಚುತ್ತಾ ಹೊರಗೆ ಓಡಿಹೋಗಿದ್ದಾರೆ. ಮದುವೆ ಮೆರವಣಿಗೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಿಂದ ಬಂದಿದ್ದು ಘಟನೆ ನಡೆದ ಕೂಡಲೇ ಅದು ಹಿಂತಿರುಗಿದೆ ಎಂದು ತಿಳಿದು ಬಂದಿದೆ. ಸ್ಥಳೀಯರ ಪ್ರಕಾರ, ಗುಂಡಿನ ದಾಳಿ ಘಟನೆಗೆ ಶಂಕಿತ ಪ್ರೇಮ ಪ್ರಕರಣ ಕಾರಣ ಎನ್ನಲಾಗಿದೆ.

ಪೊಲೀಸರು ಆರೋಪಿಯ ಪೋಷಕರನ್ನು ವಿಚಾರಣೆ ನಡೆಸುತ್ತಿದ್ದು ,ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Share This Article
Leave a Comment