ಕುಂದಾಪುರ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಮರಳು, ಬೋಟ್ ಸಹಿತ 22 ಮಂದಿಯ ಬಂಧನ

Prakhara News
1 Min Read

ಉಡುಪಿ: ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಮರಳು ಹಾಗೂ ಉಪಕರಣಗಳನ್ನು ವಶಪಡಿಸಿಕೊಂಡ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಮರತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಖಾಲಿ ಜಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು. ಈ ವೇಳೆ ವಾರಾಹಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿರುವುದು ಕಂಡುಬಂದಿದೆ.

ದಾಳಿಯಲ್ಲಿ ಸುಮಾರು 315 ಯುನಿಟ್ ಮರಳು (ಅಂದಾಜು ಮೌಲ್ಯ ರೂ. 8,50,000/-), ಮರಳು ತೆಗೆಯಲು ಬಳಸಿದ 3 ಫೈಬ‌ರ್ ಬೋಟ್‌ಗಳು (ಅಂದಾಜು ಮೌಲ್ಯ ರೂ. 3,00,000/-), ಮರದ ಹಿಡಿ ಇರುವ 6 ಕಬ್ಬಿಣದ ಹಾರೆಗಳು (ಅಂದಾಜು ಮೌಲ್ಯ ರೂ. 800/-) ಹಾಗೂ 8 ಫೈಬರ್ ಬುಟ್ಟಿಗಳು (ಅಂದಾಜು ಮೌಲ್ಯ ರೂ. 600/-)ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಈ ಪ್ರಕರಣ ಸಂಬಂಧ ಹಲ್ನಾಡು ನಿವಾಸಿ ದೇವಾನಂದ ಶೆಟ್ಟಿ ಸೇರಿದಂತೆ ಉತ್ತರ ಪ್ರದೇಶ ರಾಜ್ಯದ ಬರಾಬಂಕಿ ಮತ್ತು ಗೊಂಡ ಜಿಲ್ಲೆಗಳಿಗೆ ಸೇರಿದ ಒಟ್ಟು 22 ಮಂದಿಯನ್ನು ಬಂಧಿಸಲಾಗಿದೆ.

Share This Article
Leave a Comment