ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ., ಇದರ ಸುವರ್ಣ ವರ್ಷಾಚರಣೆಯ ಅಂಗವಾಗಿ ಬ್ಯಾಂಕಿನ ಉಡುಪಿ ಶಾಖೆಯ ನೇತೃತ್ವದಲ್ಲಿ ಉಡುಪಿಯ ದೊಡ್ಡಣ್ಣಗುಡ್ಡೆ ಪರಿಸರದಲ್ಲಿ “ಸ್ವಚ್ಛತಾ ಹೀ ಸೇವಾ” ಘೋಷಣೆಯಡಿ ಬ್ಯಾಂಕಿನ ಸ್ವಚ್ಛ ಭಾರತ್ 17ನೇ ಶ್ರಮದಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.


ಕಾರ್ಯಕ್ರಮಕ್ಕೆ ವಿಷ್ಣುಮೂರ್ತಿ ಫ್ರೆಂಡ್ಸ್ (ರಿ) ದೊಡ್ಡಣ್ಣಗುಡ್ಡೆ ಇದರ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಜೆ ಸಿ ಐ ದೊಡ್ಡಣ್ಣಗುಡ್ಡೆ ಪ್ರಕೃತಿ ಇದರ ಸಂಸ್ಥಾಪಕ ಎಂ ಎನ್ ನಾಯಕ್ ಮತ್ತು ವಿಶ್ವಕರ್ಮ ಸಮಾಜ ಸೇವೆ ಸಂಘ, ಸಗ್ರಿ-ಚಕ್ರತೀರ್ಥ ಇದರ ಅಧ್ಯಕ್ಷರಾದ ಶ್ರೀಪತಿ ಆಚಾರ್ಯ ಮತ್ತು ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್. ಆರ್.ಹರೀಶ್ ಆಚಾರ್ ಇವರು ಜೊತೆಗೂಡಿ ಚಾಲನೆ ನೀಡಿದರು.
ಚಾಲನೆ ನೀಡಿ ಮಾತನಾಡಿದ ವಿಷ್ಣುಮೂರ್ತಿ ಫ್ರೆಂಡ್ಸ್ (ರಿ) ದೊಡ್ಡಣ್ಣಗುಡ್ಡೆ ಇದರ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ , “ಸ್ವಚ್ಛ ಪರಿಸರವು ಉತ್ತಮ ಆರೋಗ್ಯ ಮತ್ತು ಸುಸ್ಥಿರ ಸಮಾಜದ ಆಧಾರವಾಗಿದ್ದು, ಸ್ವಚ್ಛತೆಯನ್ನು ಪ್ರತಿಯೊಬ್ಬರೂ ಜೀವನದ ಭಾಗವಾಗಿಸಿಕೊಳ್ಳಬೇಕು ಈ ವಿಷಯದಲ್ಲಿ ಜಾಗೃತಿ ಮೂಡಿಸಿ ಎಚ್ಚರಿಸುವ ಮಾನವೀಯ ಹಾಗೂ ಸಾಮಾಜಿಕ ಕಾರ್ಯವನ್ನು ವಿಶ್ವಕರ್ಮ ಬ್ಯಾಂಕ್ ಮಾಡುತ್ತಿರುವುದು ಅದರ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ ” ಎಂದು ಹೇಳಿದರು. ಜೆ ಸಿ ಐ ದೊಡ್ಡಣ್ಣಗುಡ್ಡೆ ಪ್ರಕೃತಿ ಇದರ ಸಂಸ್ಥಾಪಕ ಎಂ.ಎನ್. ನಾಯಕ್ ರವರು “ನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ಮುಂದಿನ ತಲೆಮಾರಿಗೆ ಉತ್ತಮ ಭವಿಷ್ಯ ನೀಡಲು ಸಾಧ್ಯ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಜಗದೀಶ್ ಪಿ ಆಚಾರ್ಯ, ನಿರ್ದೇಶಕರ ಜಗದೀಶ್ ಜೆ ಆಚಾರ್ಯ, ವಿಷ್ಣುಮೂರ್ತಿ ಫ್ರೆಂಡ್ಸ್ (ರಿ) ದೊಡ್ಡಣ್ಣಗುಡ್ಡೆ ಇದರ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಸ್ಥಾಪಕಾಧ್ಯಕ್ಷ ಸತೀಶ್ ಪುತ್ರನ್, ಪದಾಧಿಕಾರಿಗಳಾದ ನಿತಿನ್, ರಾಜೇಶ್ ಮತ್ತು ಸದಸ್ಯರು ಹಾಗೂ ಜೆಸಿಐ ದೊಡ್ಡಣ್ಣಗುಡ್ಡೆ ಪ್ರಕೃತಿ ಇದರ ಸಂಸ್ಥಾಪಕ ಜೆಸಿ ಎಂ.ಎನ್. ನಾಯಕ್, ಅಧ್ಯಕ್ಷ ಜೆಸಿ ಭರತ್ ಕುಮಾರ್, ಪೂರ್ವ ಅಧ್ಯಕ್ಷ ಮಾಜಿ ಸೈನಿಕ ಜೆಸಿ ಕೇಶವ ಆಚಾರ್ಯ, ಪದಾಧಿಕಾರಿಗಳಾದ ಜೆಸಿ ಉಮೇಶ್ ಆಚಾರ್ಯ, ಜೆಸಿ ಪ್ರಶಾಂತ್ ಆಚಾರ್ಯ, ಜೆಸಿ ಪ್ರಾರ್ಥನಾ ಮತ್ತು ಸದಸ್ಯರು ಹಾಗೂ ವಿಶ್ವಕರ್ಮ ಸಮಾಜ ಸೇವಾ ಸಂಘ ಸಗ್ರಿ- ಚಕ್ರತೀರ್ಥ ಇದರ ಅಧ್ಯಕ್ಷ ಶ್ರೀಪತಿ ಆಚಾರ್ಯ, ಪದಾಧಿಕಾರಿಗಳಾದ ರಾಮ್ ಆಚಾರ್ಯ, ಹರಿಕೃಷ್ಣ ಆಚಾರ್ಯ, ಪ್ರಸಾದ್ ಮತ್ತು ಸದಸ್ಯರು ಹಾಗೂ ವಿಷ್ಣುಮೂರ್ತಿ ಮಹಿಳಾ ಮಂಡಳಿ ದೊಡ್ಡಣ್ಣಗುಡ್ಡೆ ಇದರ ಅಧ್ಯಕ್ಷೆ ಶ್ರೀಮತಿ ವಾರಿಜಾ, ಗೌರವಾಧ್ಯಕ್ಷೆ ಶ್ರೀಮತಿ ರೂಪಾ ಸಂದೇಶ್, ಕಾರ್ಯದರ್ಶಿ ಶ್ರೀಮತಿ ಸುಮನಾ ಜಿ ಮತ್ತು ಸದಸ್ಯರು, ಬ್ಯಾಂಕಿನ ಗ್ರಾಹಕರು ಹಾಗೂ ಸಿಬ್ಬಂದಿಗಳು ಸ್ವಯಂಸೇವಕರಾಗಿ ಶ್ರಮದಾನದಲ್ಲಿ ಭಾಗವಹಿಸಿದರು.

