ಭಜನಾ ತರಬೇತುದಾರ ಪ್ರಕಾಶ್ ಕುಲಾಲ್ ನಡೂರು ನಿಧನ..

Prakhara News
1 Min Read

ಬ್ರಹ್ಮಾವರ: ಕರಾವಳಿಯ ಪ್ರಖ್ಯಾತ ಭಜನಾ ತರಬೇತುದಾರ ಪ್ರಕಾಶ್ ಕುಲಾಲ್ (35) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ನಡೂರು ಗ್ರಾಮದ ನಿವಾಸಿಯಾಗಿರುವ ಪ್ರಕಾಶ್ ಕುಲಾಲ್ ಇಂದು ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ. ಸಾವನ್ನಪ್ಪಿದ್ದಾರೆ.


ಅತ್ಯಂತ ಚುರುಕಿನ, ಪ್ರತಿಭಾಶಾಲಿ ಯುವ ಭಜನಾ ತರಬೇತುದಾರರಾಗಿದ್ದ ಪ್ರಕಾಶ್ ಕುಲಾಲ್ ನಡೂರು ನಿನ್ನೆ ಸಂಜೆ ಭಜನಾ ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಮಲಗಿದ್ದರು. ನಂತರ ಬೆಳಿಗ್ಗೆ ಅವರಿಗೆ ಆತ್ಮೀಯರೊಬ್ಬರು ಕರೆ ಮಾಡಿದಾಗ ಕರೆ ಸ್ವೀಕರಿಸದಿದ್ದಾಗ ಅನುಮಾನಗೊಂಡು ಮನೆಯ ಮಾಡಿನ ಹೆಂಚು ತೆಗೆದು ಒಳಗೆ ಹೋಗಿ ನೋಡಿದಾಗ ಹೃದಯಾಘಾತದಿಂದ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾರೆ.


ಅತಿದೊಡ್ಡ ಭಜನಾ ಕಾರ್ಯಕ್ರಮಗಳಲ್ಲಿ ಒಂದಾದ ಸಂಕೀರ್ತನ ಮಂದಾರ್ತಿ ಸೇರಿ ಹತ್ತು ಹಲವು ಕಡೆಗಳಲ್ಲಿ ತಮ್ಮನ್ನು ಭಜನೆಗಾಗಿ ಸಮರ್ಪಿಸಿಕೊಂಡ ಯುವಕ ಪ್ರಕಾಶ್ ಕುಲಾಲ್. ಯಾವುದೇ ಹಣ ಅಥವಾ ಇತರ ಫಲಾಪೇಕ್ಷೆಗಳಿಲ್ಲದೆ ಭಜನಾ ತರಬೇತಿ ನೀಡುತ್ತಿದ್ದ, ತನ್ನ ಹೆಚ್ಚಿನ ಸಮಯವನ್ನು ಭಜನೆಗಾಗಿ ಮೀಸಲಿಡುತ್ತಿದ್ದ ಯುವಕ ಪ್ರಕಾಶ್ ಕುಲಾಲ್.
ಕರಾವಳಿಯ ಭಜನಾ ಕ್ಷೇತ್ರದಲ್ಲಿ ಅತ್ಯಂತ ಲವಲವಿಕೆಯಿಂದ ಗುರುತಿಸಿಕೊಂಡು, ಸದಾ ಹಸನ್ಮುಖಿಯಾಗಿದ್ದ ಯುವಕ ತನ್ನ ಅತ್ಯಂತ ಸಣ್ಣ ವಯಸ್ಸಿನಲ್ಲೇ ಹೃದಯಾಘಾತಕ್ಕೆ ಬಲಿಯಾಗಿದ್ದು ವಿಪರ್ಯಾಸವೇ ಸರಿ.
ಮೃತರು ಪತ್ನಿ, ಚಿಕ್ಕ ಮಗು ಮತ್ತು ಪೋಷಕರನ್ನು ಅಗಲಿದ್ದಾರೆ.

Share This Article
Leave a Comment