ಸುಳ್ಯ : ಸಂಪಾಜೆ ಗೂನಡ್ಕ ಎಂಬಲ್ಲಿರುವ ಮಸೀದಿಯ ಆವರಣದಲ್ಲಿದ್ದ ಕಾಣಿಕೆ ಡಬ್ಬಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.


ಆರೋಪಿ ಆಂದ್ರಪ್ರದೇಶದ ಪಶ್ಚಿಮ ಗೊದಾವರಿ ನಿವಾಸಿ ಮಹಮ್ಮದ್ ಸಲ್ಮಾನ್ (35) ಎಂದು ಗುರುತಿಸಲಾಗಿದೆ. ಮಾರ್ಚ್ 30 ರಂದು ಸುಳ್ಯ ಠಾಣೆಯಲ್ಲಿ ಅ.ಕ್ರ 45/2026 ಕಲಂ 303(2)BNS -2023 ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಯಿತು. ಏಪ್ರಿಲ್ 06 ಪೋಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಆರೋಪಿತನಿಂದ ಕಳವು ಮಾಡಿದ 2000 ರೂ ನಗದು ಹಣವನ್ನು ಸ್ವಾದೀನಪಡಿಸಿಕೊಂಡು , ಮಾನ್ಯ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.




