ಬೆಂಗಳೂರಿನ ಲಾಡ್ಜ್‌ನಲ್ಲಿ ಎಸ್‌ಐಟಿ ಶೋಧ..!

Prakhara News
0 Min Read

ಬೆಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿದ್ಯಾರಣ್ಯಪುರದ ತಿಂಡ್ಲು ಸರ್ಕಲ್ ಬಳಿಯ ಲಾಡ್ಜ್ ಒಂದರಲ್ಲಿ ವಿಶೇಷ ತನಿಖಾ ತಂಡ ಮಹಜರು ಪ್ರಕ್ರಿಯೆ ನಡೆಸುತ್ತಿದೆ.

ಆರೋಪಿ ಚಿನ್ನಯ್ಯನನ್ನು ಕರೆದುಕೊಂಡು ಬಂದ ಪೊಲೀಸರು ತಡರಾತ್ರಿಯಿಂದ ಲಾಡ್ಜ್‌ನಲ್ಲಿ ಮಹಜರು ಮಾಡುತ್ತಿದ್ದಾರೆ. ಈ ಲಾಡ್ಜ್‌ನಲ್ಲಿ ಬುರುಡೆ ಗ್ಯಾಂಗ್‌ ಸದಸ್ಯರು ಸೇರಿ ಷಡ್ಯಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಬುರುಡೆ ತೆಗೆದುಕೊಂಡು ಬರುವ ಮೊದಲು ಇದೇ ಲಾಡ್ಜ್‌ನಲ್ಲಿ ಹಲವರನ್ನು ಭೇಟಿಯಾಗಿದ್ದ ಬಗ್ಗೆ ಎಸ್‌ಐಟಿ ಚಿನ್ನಯ್ಯ ಬಾಯಿಬಿಟ್ಟಿದ್ದಾನೆ. ಹೀಗಾಗಿ ಎಸ್‌ಪಿ ಸೈಮನ್ ನೇತೃತ್ವದಲ್ಲಿ ಸುಮಾರು 20 ಅಧಿಕಾರಿಗಳು, ಸಿಬ್ಬಂದಿ ಮಹಜರು ಪ್ರಕ್ರಿಯೆ ನಡೆಯುತ್ತಿದ್ದಾರೆ.

Share This Article
Leave a Comment