ನವದೆಹಲಿ : ಭಾರತದ ರಾಜಕೀಯ ಇತಿಹಾಸದಲ್ಲಿ ಮೋದಿ ಐತಿಹಾಸಿಕ ದಾಖಲೆ,8931 ದಿನ ಸುದೀರ್ಘ ಅವಧಿಗೆ ಸರ್ಕಾರದ ಮುಖ್ಯಸ್ಥ.

Prakhara News
1 Min Read

ನವದೆಹಲಿ : ಭಾರತದ ರಾಜಕೀಯ ಇತಿಹಾಸದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸರ್ಕಾರದ ಮುಖ್ಯಸ್ಥರಾಗಿ 8,931 ದಿನಗಳನ್ನು ಪೂರೈಸುವ ಮೂಲಕ ದೇಶದಲ್ಲಿ ಅತಿ ಹೆಚ್ಚು ಕಾಲ ಅಧಿಕಾರ ನಡೆಸಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಿಕ್ಕಿಂನ ಮಾಜಿ ಸಿಎಂ ಪವನ್ ಕುಮಾರ್ ಚಾಮ್ಲಿಂಗ್ ಹೆಸರಿನಲ್ಲಿದ್ದ ದಶಕಗಳ ಕಾಲದ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಅವರ ರಾಜಕೀಯ ಹಾದಿ ಅಕ್ಟೋಬರ್ 7, 2001 ರಿಂದ ಮೇ 22, 2014 ರವರೆಗೆ ಗುಜರಾತ್ ಮುಖ್ಯ ಮಂತ್ರಿಯಾಗಿ ಬಳಿಕ ಮೇ 26, 2014ರಿಂದ ಈವರೆಗೂ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ರಾಜಕೀಯ ಮೈಲಿಗಲ್ಲು ಮೈಲಿಗಲ್ಲುಗಳು ಗುಜರಾತ್ ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿದ್ದು ಭಾರತಕ್ಕೆ ಸ್ವಾತಂತ್ರ‍್ಯ ಸಿಕ್ಕ ನಂತರ ಜನಿಸಿ, ಸುದೀರ್ಘ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ನಾಯಕ ಪ್ರಬಲ ನಾಯಕರಲ್ಲಿ ಒಬ್ಬರಾಗಿದ್ದಾರೆ.

Share This Article
Leave a Comment