ಉಡುಪಿ : ಆನ್‌ಲೈನ್ ಟ್ರೇಡಿಂಗ್ ವಂಚನೆ- ಆರು ಮಂದಿ ಬಂಧನ

Prakhara News
1 Min Read

ಉಡುಪಿ: ಎರಡು ಪ್ರತ್ಯೇಕ ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿ ಒಟ್ಟು ಆರು ಮಂದಿ ಆರೋಪಿಗಳನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿ, ಒಟ್ಟು ೬ಲಕ್ಷ ರೂ. ನಗದು ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾಪು ತಾಲೂಕಿನ ಶಂಕರಪುರದ ಜೊಸ್ಸಿ ರವೀಂದ್ರ ಡಿಕ್ರೂಸ್(೫೪), ಎಂಬವರಿಗೆ ಹೂಡಿಕೆ ಹೆಸರಿನಲ್ಲಿ ಒಟ್ಟು ೭೫,೦೦,೦೦೦ರೂ. ಹಣವನ್ನು ಆನ್‌ಲೈನ್ ವಂಚನೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸೆನ್ ಪೊಲೀಸರು, ಸುರತ್ಕಲ್ ಕೋಡಿಕೆರೆಯ ಮೊಹಮದ್ ಕೈಸ್(೨೦), ಹೆಜಮಾಡಿ ಕನ್ನಂಗಾರಿನ ಅಹಮದ್ ಅನ್ವೀಜ್ (೨೦), ಬಂಟ್ವಾಳ ಜೋಡುಮಾರ್ಗದ ಸಫ್ವಾನ್(೩೦), ತಾಸೀರ್(೩೧) ಎಂಬವರನ್ನು ಬಂಧಿಸಿ, ಮೊಬೈಲ್ ಫೋನ್‌ಗಳನ್ನು ಹಾಗೂ ೪,೦೦,೦೦೦ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.

ಅದೇ ರೀತಿ ಉಡುಪಿ ಅಂಬಾಗಿಲು ಪೆರಪಂಳ್ಳಿಯ ತೀರ್ಥರಾಜ ಶೆಣೈ(೫೧) ಎಂಬವರಿಗೆ ೪೪,೦೦,೦೦೦ರೂ. ಹಣ ಆನ್‌ಲೈನ್ ಮೂಲಕ ವಂಚಿಸಿರುವ ಪ್ರಕರಣದಲ್ಲಿ ಮೈಸೂರು ಹುಣಸೂರಿನ ಶೋಯಬ್ ಅಹಮದ್(೨೮) ಮತ್ತು ಮುz್ದÁಸಿರ್ ಅಹಮದ್(೪೦) ಎಂಬವರನ್ನು ಬಂಧಿಸಿ, ೨,೦೦,೦೦೦ರೂ. ಹಣ ಮತ್ತು ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಎರಡೂ ಪ್ರಕರಣದಲ್ಲೂ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ಸೆನ್ ಪೊಲೀಸ್ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಎಎಸ್ಸೆÊ ಉಮೇಶ್ ಜೋಗಿ, ಸಿಬ್ಬಂದಿ, ಪ್ರವೀಣ್ ಕುಮಾರ್, ಪ್ರವೀಣ ಶೆಟ್ಟಿಗಾರ್, ಧರ್ಮಪ್ಪ, ರಾಜೇಶ್, ವೆಂಕಟೇಶ್ ಜಂತ್ರ, ರಾಘವೇಂದ್ರ, ಪವನ್, ದಿಕ್ಷೀತ್, ನಿಲೇಶ್ ಅವರನ್ನು ಒಳಗೊಂಡ ವಿಶೇಷ ತಂಡ ನಡೆಸಿದೆ

Share This Article
Leave a Comment