ಕಾಸರಗೋಡು: ಕೇರಳಿಗರ ಅಚ್ಚುಮೆಚ್ಚಿನ ‘ಓಣಂ’ ಹಬ್ಬದ ಸಂದರ್ಭದಲ್ಲಿ ‘ಪೂಕಳಂ’ ಎನ್ನುವುದು ಮನೆಯ ಅಂಗಳದಲ್ಲಿ ತಾಜಾ ಹೂವುಗಳಿಂದ ಸುಂದರವಾದ ರಂಗೋಲಿಗಳನ್ನು ರಚಿಸುವ ಸಂಪ್ರದಾಯವಾಗಿದೆ. ಇದು ರಾಜ ಮಹಾಬಲಿಯ ಸ್ವಾಗತದ ಸಂಕೇತವಾಗಿದೆ ಮತ್ತು ಓಣಂನ ಹತ್ತು ದಿನಗಳವರೆಗೆ ಪ್ರತಿದಿನ ಒಂದು ಹೊಸ ಪದರವನ್ನು ಸೇರಿಸಿ, ಅದನ್ನು ದೊಡ್ಡದಾಗಿ ಮತ್ತು ಹೆಚ್ಚು ಜಟಿಲಗೊಳಿಸಲಾಗುತ್ತದೆ. ಇದು ಕೇರಳದ ಪ್ರಮುಖ ಹಬ್ಬದ ಆಚರಣೆಯ ಭಾಗವಾಗಿದೆ.


ಈ ಹಿನ್ನಲೆ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಶನ್ (ಮೈಸ್ ), ಪೈವಳಿಕೆಯಲ್ಲಿ ವಿದ್ಯಾರ್ಥಿಗಳು ಪೂಕಳಂ ರಚಿಸಿ ಓಣಂ ಹಬ್ಬವನ್ನು ಸಂಭ್ರಮಿಸಿದ್ದಾರೆ.
ಈ ಸಂದರ್ಭದಲ್ಲಿ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಶನ್ ನ ಶಿಕ್ಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

