ಮಂಗಳೂರು: ಮಂಗಳೂರು ಉದ್ಯಮಿ ಮರೋಳಿ ಮೂಲದ ನಿತಿನ್ ಪೂಜಾರಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು ಆತ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯೇ ಅಲ್ಲ. ಮಹಿಳೆಯೊಬ್ಬಳ ಸಂಗದಿಂದಲೇ ಈ ರೀತಿ ಆಯ್ತು ಎಂದು ಗೆಳೆಯರು ಆರೋಪಿಸಿದ್ದಾರೆ.


ಈತನಿಗೆ ಆಂಟಿಯೊಬ್ಬಳ ಜೊತೆ ಸ್ನೇಹವಿತ್ತು.ಆನಂತರ ಅದು ಪ್ರೀತಿಯಾಗಿ ಪರಿವರ್ತನೆ ಆಗಿ ಮದುವೆಯಾಗುವ ಹಂತಕ್ಕೂ ಬಂದಿತ್ತು. ಮದುವೆಯಾಗುವ ಮೊದಲೇ ಇವರು ಲಿವಿಂಗ್ ಟುಗೆದರ್ ಆರಂಭಿಸಿದ್ದರು ಎಂಬ ಚರ್ಚೆ ಆಪ್ತರ ವಲಯದಲ್ಲಿ ನಡೆಯುತ್ತಿದೆ.
ನಿತಿನ್ ವಿಷ ಸೇವಿಸಿದ್ದಾರೆಂದು ಅದೇ ಮಹಿಳೆ ಹೊಟೇಲ್ ಸಿಬ್ಬಂದಿಗೆ ಕರೆ ಮಾಡಿದ್ದರಂತೆ. ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಅವರು ಸಾವನ್ನಪ್ಪಿದ್ದರು. ವಿಷ ಸೇವಿಸಿದ್ರೆ ಎಷ್ಟೇ ಗಂಭೀರವಾಗಿದ್ರೂ ಒಂದೆರಡು ದಿನವಾದರೂ ಇರುತ್ತಾರೆ.ಆದರೆ ಇವರು ದಿಢೀರ್ ಸಾವನ್ನಪ್ಪಿದ್ದಾರೆ. ಇವರೇ ವಿಷ ಸೇವಿಸಿದ್ರಾ ಅಥವಾ ಇವರಿಗೆ ವಿಷ ಪ್ರಾಶಣ ಮಾಡಲಾಯಿತಾ ಎಂಬಿತ್ಯಾದಿ ಅನುಮಾನಗಳು ಹುಟ್ಟಿಕೊಂಡಿವೆ.
ಈ ಸಾವಿನ ಬಗ್ಗೆ ಅನುಮಾನಗಳಿದ್ದರೆ ಠಾಣೆಗೆ ಬಂದು ಮಾಹಿತಿ ನೀಡಿ ತನಿಖೆ ನಡೆಸುತ್ತೇವೆ. ಆದರೆ ಅವರ ತಾಯಿ ದೂರು ನೀಡುವಾಗಲೂ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿಲ್ಲ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಂಡಿದೆ.
