ಮುಡಿಪು: ಜೆನಿತ್ ಶಾಲೆಯಲ್ಲಿ ಭಾರತದ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಗೌರವದೊಂದಿಗೆ ಆಚರಿಸಲಾಯಿತು. ಈ ವಿಶೇಷ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್ – ಮಂಗಳೂರು, ಇದರ ಸಂಸ್ಥಾಪಕಿ ಹಿಲ್ದಾ ರಾಯಪ್ಪನ್ ಅವರು ಭಾಗವಹಿಸಿದರು. ಅವರು ಮಕ್ಕಳು ತಮ್ಮ ಜೀವನವನ್ನು ಮೌಲ್ಯಗಳು, ಶಿಸ್ತು ಮತ್ತು ಆತ್ಮವಿಶ್ವಾಸದೊಂದಿಗೆ ಹೇಗೆ ನಡೆಸಬೇಕು ಎಂಬ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾಲಕರಾದ ನಹದ ಮಜೀದ್ ರವರು ವಹಿಸಿದ್ದರು. ಮುಖ್ಯಶಿಕ್ಷಕಿ ಸಫೂರಾ, ಆಡಳಿತಾಧಿಕಾರಿ ಮೊಯ್ದೀನ್, ಪಿಟಿಎ ಅಧ್ಯಕ್ಷ ಹನೀಫ್ ಹಾಗೂ ಕಾರ್ಯದರ್ಶಿ ಅಬ್ದುಲ್ ಖಾದರ್ , ಅವರೊಂದಿಗೆ ಪಿಟಿಎ ಸದಸ್ಯರು ಸಹ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಗೌರವ ಹೆಚ್ಚಿಸಿದರು.



