ಅತ್ತಾವರ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ಬ್ರಹ್ಮ ಕಲಶೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ

Prakhara News
1 Min Read


ಮಂಗಳೂರು : ನೂರಾರು ವರ್ಷಗಳ ಇತಿಹಾಸವುಳ್ಳ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಬ್ರಹ್ಮ ಕಲಶಾಭಿಷೇಕವು ಏಪ್ರಿಲ್ 19 ರಿಂದ ಮೊದಲ್ಗೊಂಡು ಏಪ್ರಿಲ್ 23ರ ತನಕ ನಡೆಯಲಿದೆ. ಇದರ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಮಾರ್ಚ್ 22 ರಂದು ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ನಡೆಯಿತು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಅಯ್ಯಪ್ಪ ದೇವಸ್ಥಾನದ ಬ್ರಹ್ಮ ಕಲಶದಲ್ಲಿ ಪಾಲ್ಗೊಳ್ಳುವ ಸೌಭಾಗ್ಯ ದೊರೆತಿರುವುದು ಪುಣ್ಯದ ಫಲ. ಒಂದು ಊರಿನಲ್ಲಿ ಬ್ರಹ್ಮ ಕಲಶ ನಡೆದರೆ ಆ ಊರಿನ ಉನ್ನತಿಗೆ ಕಾರಣವಾಗುತ್ತದೆ . ಊರಿಗೆ ಸಂಕಷ್ಟ ಬರುವುದಿಲ್ಲ. ಈ ದೇವತಾ ಕಾರ್ಯದಲ್ಲಿ ಊರ ಪರವೂರಿನ ಎಲ್ಲರೂ ಭಾಗವಹಿಸಿ ಸುಸೂತ್ರವಾಗಿ ಬ್ರಹ್ಮ ಕಲಶ ನಡೆಯುವಂತೆ ಪ್ರತಿಯೊಬ್ಬರು ಅಳಿಲ ಸೇವೆ ಮಾಡುವ ಮೂಲಕ ಭಾಗಿಗಳಾಗೋಣ ಎಂದರು.

ಮುಖ್ಯ ಅತಿಥಿಗಳಾಗಿ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ರತೀಂದ್ರನಾಥ. ಬ್ರಹ್ಮಕಲಶ ಸಮಿತಿಯ ಅಧ್ಯಕ್ಷರಾದ ಸೂರಜ್ ರಾಘವನ್, ಕಾರ್ಯಾಧ್ಯಕ್ಷರಾದ ಗೋಕುಲದಾಸ್ ಮತ್ತು ಮುರುಳಿಧರ್, ಗೌರವ ಕೋಶಾಧಿಕಾರಿಗಳಾದ ಸಂತೋಷ ಶೆಟ್ಟಿ, ಸ್ವಾಗತ ಸಮಿತಿಯ ಅಧ್ಯಕ್ಷರಾದ ರಾಜರತ್ನ ಸನಿಲ್, ಗೌರವ ಕಾರ್ಯದರ್ಶಿಗಳಾದ ಜನಾರ್ಧನ್ ಅತ್ತಾವರ , ಅಯ್ಯಪ್ಪ ದೇವಸ್ಥಾನ ಪಡೀಲ್ ಇದರ ಅಧ್ಯಕ್ಷರಾದ ಮೋಹನ್ ಪಡೀಲ್ ,ಆತ್ಮಶಕ್ತಿ ಕೋ ಆಪರೇಟಿವ್ ಸೊಸೈಟಿ ಚೇರ್ರ್ಮನ್ ಚಿತ್ತ ರಂಜನ್, ಕರುಣ್ ಇನ್ಫ್ರಾ ಸ್ಟ್ರಕ್ಚರರ್ಸ್ ಮಾಲಕರಾದ ಕರುಣಾಕರ್, ಹಿಮಾಲಯ ರೋಡ್ ಲೈನ್ ಮಂಗಳೂರು ಮಾಲೀಕರಾದ ಅಶೋಕ್ ಯೆಯ್ಯಾಡಿ, ಉದ್ಯಮಿ ಸುರೇಶ್ ಪೂಜಾರಿ ಕಣ್ಣೂರು, ಶಶಿಧರ್, ರಾಮಪ್ರಸಾದ್ ಅರ್ಥ್ ಮೂವರ್ಸನ ಅಜಿತ್, ಗುತ್ತಿಗೆದಾರರಾದ ಕೇಶವ ಬಲರಾಜ್, ಉಪಾಧ್ಯಕ್ಷರಾದ ಪದ್ಮನಾಭನ್, ಪ್ರಧಾನ ಕಾರ್ಯದರ್ಶಿಯಾದ ಕ್ಷಿತಿ ಮಮ್ಲೂರು, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸೂರ್ಯಕಾಂತ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಾಹಿತಿ, ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ, ಬ್ರಹ್ಮ ಕಲಶ ಸಮಿತಿಯ ಉಪಾಧ್ಯಕ್ಷೆ ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು. ರಘುವೀರ್ ಬಾಬುಗುಡ್ಡೆ ಕಾರ್ಯಕ್ರಮ ನಿರೂಪಿಸಿ. ವಂದಿಸಿದರು.

Share This Article
Leave a Comment